ಕಾಂಗ್ರೆಸ್‌ನವರೇ ಕೋಮುವಾದಿಗಳು; ಗಲಭೆಗೆ ಕಾಂಗ್ರೆಸ್‌ ಕಾರ್ಯಕರ್ತನೇ ಕಾರಣ: ಅಶ್ವತ್ಥ ನಾರಾಯಣ

ಕಾಂಗ್ರೆಸ್‌ನವರೇ ಕೋಮುವಾದಿಗಳು, ಕೆ.ಜೆ ಹಳ್ಳಿ, ಡಿ.ಜೆ.ಹಳ್ಳಿ ಗಲಭೆಗಳಿಗೆ ಕಾಂಗ್ರೆಸ್ ಕಾರ್ಯಕರ್ತನೇ ಕಾರಣ ಎಂದು ಅಶ್ವತ್ಧ ನಾರಾಯಣ ಆರೋಪಿಸಿದ್ದಾರೆ.

ಬೆಂಗಳೂರಿನ  ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಗಳಾಲ್ಲಾದ ಗಲಭೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯತೆ ಹಾಗೂ ನವೀನ್​ನ ಅವಹೇಳನಕಾರಿ ಹೇಳಿಕೆ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪಿಸಿದ್ದರು. ಅವರ ಆರೋಪಕ್ಕೆ ಪ್ರತಿಕ್ರಿಸಿರುವ ಉಪ ಮುಖ್ಯಮುಂತ್ರಿ ಡಾ. ಅಶ್ವಥನಾರಾಯಣ, ಕೆ.ಜೆ ಹಳ್ಳಿ, ಡಿ.ಜೆ.ಹಳ್ಳಿ ಗಲಭೆಗಳಿಗೆ ಕಾಂಗ್ರೆಸ್ ಕಾರ್ಯಕರ್ತನೇ ಕಾರಣ. ನವೀನ್ ಯಾರ ಬೆಂಬಲಿಗ ಅನ್ನೋದು ಈಗಾಗಲೇ ಗೊತ್ತಾಗಿದೆ.  ಆತನ ಫೇಸ್ ಬುಕ್ ಪೇಜ್ ನೋಡಿ ಆತ ಯಾರ ಬೆಂಬಲಿಗ ಅಂತಾ ಗೊತ್ತಾಗುತ್ತೆ. ಸತ್ಯವನ್ನ ಯಾರಿಂದಲೂ ಮುಚ್ಚಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರು ಇಲ್ಲದನ್ನ ತಡಕಾಡುತ್ತಿದ್ದಾರೆ. ಆದರೆ ಅವರಿಗೆ ಪಾಪ ಏನ್ ಹೇಳಬೇಕೋ ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರು ಇವತ್ತು ಹತಾಶರಾಗಿದ್ದಾರೆ. ಅವರಿಗೆ ಇದು ನುಂಗಲಾರದ ತುತ್ತಾಗಿದೆ. ಅಲ್ಪಸಂಖ್ಯಾತರ ಮತಕ್ಕಾಗಿ ಕಾಂಗ್ರೆಸ್ ಮತ್ತು ಎಸ್​ಡಿಪಿಐ ಸ್ಪರ್ಧೆಗೆ ಬಿದ್ದಿವೆ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಅವರ ತಪ್ಪನ್ನ ಮುಚ್ಚಿಕೊಳ್ಳಲು ಬಿಜೆಪಿ ಕಡೆಗೆ ಬೆಟ್ಟು ಮಾಡಿದ್ದಾರೆ. ದೇಶದಲ್ಲಿ ಕೋಮುವಾದಿಗಳು ಅಂತಾ ಇದ್ದರೆ ಅದು ಕಾಂಗ್ರೆಸ್​ನವರೇ. ರಾಜ್ಯದಲ್ಲಿ SDPI – PFI ಬೆಳೆದಿದೆ ಎಂದರೆ ಅದು ಕಾಂಗ್ರೆಸ್​ನಿಂದಲೇ. ಅವರು ಸ್ಪಷ್ಟ ನಿಲುವು ಇಟ್ಟುಕೊಳ್ಳಬೇಕು. ಬೆರೆಕೆ ಮಾಡಬಾರದು ಎಂದು ಅಶ್ವಥ ನಾರಾಯಣ ಆರೋಪಿಸಿದ್ದಾರೆ.

ಸಚಿವ ಆರ್‌ ಅಶೋಕ್‌ ಅವರು SDPI – PFI ಸಂಘಟನೆಗಳನ್ನು ಬ್ಯಾನ್‌ ಮಾಡುವುದಾಗಿ ಹೇಳಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಶ್ವಥ್‌ ನಾರಾಯಣ್, ನಾವು ಕಾನೂನಿನ ಪ್ರಕಾರ ಕೈಗೊಳ್ಳತ್ತೇವೆ. SDPI – PFI ಸಂಘಟನೆ ಮುಖಂಡರು ಗಲಭೆಯಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಮೂರು ದಿನಗಳ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಮುಸ್ಲಿಮ್ ಕೋಮಿನ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿ ಗಲಭೆ ನಡೆಸಿದ್ದರು. ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಅವರು ಫೇಸ್​ಬುಕ್​ನಲ್ಲಿ ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ ಕಾರಣವೊಡ್ಡಿ ಜನರು ದೊಡ್ಡ ಗಲಾಟೆ ನಡೆಸಿದ್ದರು. ಡಿಜೆ ಹಳ್ಳಿ ಪೊಲೀಸ್ ಠಾಣೆ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿದ್ದರು.


Read Also: ಕೋಮು ಗಲಬೆಗಳಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತನ ಮೇಲಿನ ಕೇಸ್‌ಗಳನ್ನು ಹಿಂಪಡೆಯುವುದಿಲ್ಲ: ಬಸವರಾಜ್ ಬೊಮ್ಮಾಯಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights