ಕಳೆದ ಮೂರು ವರ್ಷಗಳಲ್ಲಿ 348 ಜನರು ಪೊಲೀಸ್‌ ಕಸ್ಟಡಿಯಲ್ಲಿ ಸಾವು: 1189 ಜನರ ಮೇಲೆ ದೌರ್ಜನ್ಯ!

ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 348 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಬಂಧನ ಸಮಯದಲ್ಲಿ 1,189 ಜನರು ಚಿತ್ರಹಿಂಸೆ ಅನುಭವಿಸಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಕಸ್ಟಡಿ ಸಾವುಗಳು ಮತ್ತು ದೌಜನ್ಯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆಯೇ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಹಿತಿಯ ಪ್ರಕಾರ 2018 ರಲ್ಲಿ 136 ಜನರು, 2019 ರಲ್ಲಿ 112 ಮತ್ತು 2020 ರಲ್ಲಿ 100 ಜನರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, 2018 ರಲ್ಲಿ 542 ಜನರು, 2019 ರಲ್ಲಿ 411 ಮತ್ತು 2020 ರಲ್ಲಿ 236 ಜನರು ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ ಹಿಂಸೆ ಅನುಭವಿಸಿದ್ದಾರೆ ಎಂದು ರೈ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಪ್ರವಾಹ: 1,171 ಗ್ರಾಮಗಳು ಜಲಾವೃತ; ಮರದ ಮೇಲೆ ದಿನ ಕಳೆದ ಜನರು!

ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ನಾಗರಿಕರ ಮೇಲೆ ಪೊಲೀಸ್ ದೌರ್ಜನ್ಯದ ವರದಿಗಳನ್ನು ಸರ್ಕಾರ ಗಮನಿಸಿದೆಯೇ ಮತ್ತು ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕಾಂಗ್ರೆಸ್ ಸಂಸದರು ಪ್ರಶ್ನಿಸಿದರು.

ಕೇಂದ್ರಕ್ಕೆ ಈ ಬಗ್ಗೆ ಪ್ರತ್ಯೇಕ ಮಾಹಿತಿ ಇಲ್ಲ ಎಂದು ರೈ ಹೇಳಿದರು.

ಕೊರೊನಾ ವೈರಸ್‌ ಪ್ರೋಟೊಕಾಲ್‌ಗಳನ್ನು ಜಾರಿಗೊಳಿಸಲು ಭಾರತೀಯ ಅಧಿಕಾರಿಗಳು ಭಾರೀ ಬಲವನ್ನು ಬಳಸಿದರು. ಮಾರ್ಚ್ 2020 ರಲ್ಲಿ ಜಾರಿಯಾದ ಲಾಕ್‌ಡೌನ್ ವೇಳೆ ಜನರ ಮೇಲೆ ಪೊಲೀಸರ ದೌರ್ಜನ್ಯಗಳು ಹಾಗೂ ಕೆಲವು ಜನರ ಮೇಲೆ ಗುಂಡು ಹಾರಿಸಿದ್ದೂ ಕೂಡ ವರದಿಯಾಗಿದೆ. ದೌರ್ಜನ್ಯಕ್ಕೆ ಒಳಗಾದವರಲ್ಲಿ ಹಲವರು ಕೇವಲ ದಿನಸಿ ವಸ್ತುಗಳನ್ನು ಖರೀದಿಸುತ್ತಿದ್ದವರು ಅಥವಾ ತಮ್ಮೂರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರಾಗಿದ್ದಾರೆ.

ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ‘ಅದಾನಿ ಕಂಪನಿ’ಯ ಬೋರ್ಡ್‌ಗಳನ್ನು ದ್ವಂಸಗೊಳಿಸಿದ ಶಿವಸೇನಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights