ಕಾಂಪೌಂಡ್ ಹಾರಿ ಮನೆಯ ಒಳನುಗ್ಗಿದ್ದ ನಾಯಿಯನ್ನು ಹೊತ್ತೊಯ್ದಿ ಚಿರತೆ…!
ಮನೆಯ ಒಳಭಾಗದಲ್ಲಿದ್ದ ಡ್ಯಾಶ್ಹೌಂಡ್ ನಾಯಿಯನ್ನು ಚಿರತೆಯೊಂದು ಕಾಂಪೌಂಡ್ ಹಾರಿ ಮನೆಯ ಒಳನುಗ್ಗಿ ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದಲ್ಲಿ ಶನಿವಾರ ಬೆಳಗಿನಜಾವ ನಡೆದಿದೆ. ಹೊಳೆಕೊಪ್ಪ ಗ್ರಾಮದ ರಘುನಾಥ್ ಎಂಬುವವರ ಮನೆಯಲ್ಲಿ, ಈ ಘಟನೆ ನಡೆದಿದೆ. ಎರಡು ನಾಯಿಗಳಿದ್ದು ಒಂದು ತಪ್ಪಿಸಿಕೊಂಡಿದೆ. ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಬೆಳಿಗ್ಗೆ ಎದ್ದು ಡ್ಯಾಶ್ಹೌಂಡ್ ನಾಯಿ ಹುಡುಕಿದರು ಸಿಗದೇ ಇದ್ದಾಗ, ಸಿ.ಸಿ. ಟಿವಿ ಕ್ಯಾಮೆರಾ ಪರಿಶೀಲಿಸಿದ ಬಳಿಕ ವಿಷಯ ಬಹಿರಂಗವಾಗಿದೆ. ಮನೆ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷದಲ್ಲಿ ಹೊಂಚು ಹಾಕಿದ ಚಿರತೆ, ಮನೆಯ ಒಳಗೆ ನುಗ್ಗಿತ್ತು. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು, ಜನರು ಕೂಡಾ ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ತಿರುಗಾಡುವುದಕ್ಕೆ ಜನ ಆತಂಕಗೊಂಡಿದ್ದಾರೆ.