ಕೇಂದ್ರದಿಂದ ಮಾರ್ಗಸೂಚಿ ಪ್ರಕಟ : ಯಾವುದಕ್ಕೆ ವಿನಾಯಿತಿ..? ಯಾವುದಕ್ಕಿಲ್ಲ?

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ ಮೇ3 ರರವೆರೆಗೂ ಲಾಕ್ವ ಡೌನ್ ಮುಂದುವರೆಸುವುದಾಗಿ ಹೇಳಿದ್ದು, ಇಂದು ಕೇಂದ್ರದಿಂದ ಮಾರ್ಗಸೂಚಿ ಪ್ರಕಟವಾಗಿದೆ. ಈ ಮಾರ್ಗಸೂಚಿ ಮೂಲಕ ಯಾವುದಕ್ಕೆಲ್ಲ ವಿನಾಯಿತಿ ಸಿಗಲಿದೆ ಅನ್ನೋದನ್ನ ನೋಡೋನ

ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ರೈತರಿಗೆ, ಸಣ್ಣ ಸಣ್ಣ ಕೈಗಾರಿಕೆಗಳಿಗೆ ಕೊಂಚ ಮಟ್ಟದ ವಿನಾಯಿತಿ ನೀಡಲಾಗಿದ್ದು, ಇದಕ್ಕೂ ಕೆಲ ಷರತ್ತು ಗಳನ್ನು ವಿಧಿಸಲಾಗಿದೆ. ರೈತರ ಬೆಳೆ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಹಾಲು, ಮೊಸರು ಉತ್ಪನ್ನಗಳಿಗೆ ಷರತ್ತು ಬದ್ಧ ಸಡಿಲಿಕೆ ನೀಡಲಾಗಿದೆ.

ಯಾವುದೆಲ್ಲ ಬಂದ್ ? ಯಾವುದು ಇರುತ್ತೆ?

ಯಾವುದೇ ಸಂಚಾರ ಇಲ್ಲ. ಧಾರ್ಮಿಕ ಕ್ಷೇತ್ರಗಳು ತೆರೆಯುವಂತಿಲ್ಲ. ಮದ್ಯಮಾರಾಟ ಮಾಡುವಂತಿಲ್ಲ.ಏ20 ರವರೆಗೆ ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳಿಗೆ ಸಂಚರಿಸಲು ಅವಕಾಶ ಇದೆ. ಆದರೆ ಇದಕ್ಕೆ ಸೂಕ್ತ ದಾಖಲಾತಿಗಳು ಬೇಕಾಗುತ್ತದೆ.

ಇದರ ಜೊತೆಗೆ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಕೃಷಿ ಸಂಬಂಧ ಚಟುವಟಿಕೆಗಳಿಗೆ ಸಡಿಲಿಕೆಗೊಳಿಸಲಾಗಿದೆ. ಬ್ಯಾಂಕ್ ನಿರ್ವಹಣೆ ಇದೆ. ಮೆಡಿಸನ್ ಸಂಬಂಧ ಫ್ಯಾಕ್ಟರಿ ಓಪನ್ ಮಾಡಬಹುದು. ಆದರೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಜೊತೆಗೆ ಕೆಲಸ ಮಾಡುವ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಕೆ ಮಾಡಬೇಕು. ಕೆಲಸದವರು ಕಡಿಮೆ ಸಂಖ್ಯೆಯಲ್ಲಿ ಇರಬೇಕು ಎಂದು ಷರತ್ತುಬದ್ಧ ಸಡಿಕೆಗೊಳಿಸಲಾಗಿದೆ.

ಜೊತೆಗೆ ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಜ್ಞಾನ ವೃದ್ಧಿ ದೃಷ್ಟಿಯಿಂದ ಆನ್ ಲೈನ್ ಟೀಚಿಂಗ್ ಗೆ ಪ್ರೋತ್ಸಾಹ ನೀಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಕಡ್ಡಾಯ. ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಣೆ. ಇ-ಕಾಮರ್ಸ್ ಸಿಬ್ಬಂಧಿಗೆ ವಿನಾಯಿತಿ ನೀಡಲಾಗಿದೆ. ಕೃಷಿ ಸಂಬಂಧ ಸಂಚಾರಿಗಳು ಚಾಲಕರ ಜೊತೆಗ ಒಬ್ಬರು ಮಾತ್ರ ಪ್ರಯಾಣಿಸಬೇಕು.

ಸಾರಿಗೆ ಬಂದ್,  ಮೆಟ್ರೋ ಸಂಚಾರ ಇರೋದಿಲ್ಲ. ಸಾರ್ವಜನಿಕ ಸಮಾರಂಭಗಳಿಗೆ ಅವಕಾಶ ಇಲ್ಲ. ದೇಗುಲ, ಚರ್ಚ್, ಮಸೀದ್ ತೆರೆಯುವಂತಿಲ್ಲ. ಟ್ಯಾಕ್ಸಿ, ಸಿನಿಮಾ ಮಾಲ್ ಇಲ್ಲ.

ಕಾಫಿ-ತೋಟಗಳಲ್ಲಿ ಶೇ.50 ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಬಹುದು. ಕುಕ್ಕುಟ್ಟೋಮ್ಯಮಕ್ಕೂ ಅವಕಾಶ ನೀಡಲಾಗಿದೆ. ಪೆಟ್ರೋಲ್ -ಡಿಸೇಲ್ ಲಭ್ಯ ಇರುತ್ತದೆ. ದಿನಗೂಲಿ ನೌಕರರು ನರೇಗಾ ಯೋಜನೆ ಅಡಿ ಕೆಲಸಕ್ಕೆ ಹಾಜರಾಗಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights