ಕೊರೊನಾ ವಿರುದ್ಧ ಸಮರ : ಭಾರತಕ್ಕೆ ಸಹಾಯ ಹಸ್ತ ಚಾಚಿದ ದೊಡ್ಡಣ್ಣ…

ಔಷಧಿಯಿಲ್ಲದ, ಕಣ್ಣಿಗೆ ಕಾಣದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಪ್ರಯತ್ನ ಮಾಡುತ್ತಲೇ ಇವೆ. ಇದರಲ್ಲಿ ಭಾರತ ಕೂಡ ಒಂದು. ಆದರೆ ಕೊರೊನಾ ಸೋಂಕಿತರನ್ನು ಹೆಚ್ಚಾಗಿ ಹೊಂದಿರುವ ಅಮೆರಿಕಾ ಸದ್ಯ ಭಾರತಕ್ಕೆ ವೆಂಟಿಲೇಟರ್​​ಗಳನ್ನು ದಾನ ಮಾಡಲು ಮುಂದಾಗಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಹೌದು… ದೇಶದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆದಿದ್ದರೂ, ಯುದ್ಧಕ್ಕೆ ಬೇಕಾದ ಉಪಕರಣಗಳು ಅರ್ಥಾತ್ ವೆಂಟಿಲೇಟರ್ ಅಗತ್ಯ ವಸ್ತುಗಳು ಅವಶ್ಯಕತೆಗೆ ತಕ್ಕಂತೆ ಇಲ್ಲದೇ ತೊಂದರೆ ಅನುಭವಿಸುವಂತಾಗಿತ್ತು. ಜೊತೆಗೆ ಚೀನಾ ನೀಡುವ ಗುಣಮಟ್ಟವಲ್ಲದ ವೆಂಟಿಲೇಟರ್ ಗಳನ್ನು ಬಳಕೆ ಮಾಡಿಕೊಳ್ಳವ ಅನಿವಾರ್ಯತೆ ಎದುರಾಗಿತ್ತು. ಆದರೆ ಕೊರೊನಾ ವಿರುದ್ಧ ಹೋರಾಡಲು ವಿಶ್ವದ ದೊಡ್ಡಣ್ಣ ಭಾರತಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಜೊತೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಕೊವಿಡ್ 19 ವಿರುದ್ಧ ಹೋರಾಡಲು ಲಸಿಕೆ ಕಂಡು ಹಿಡಿಯುವಲ್ಲಿ ಅಮೆರಿಕವು ಭಾರತದ ಜೊತೆ ಕೈಜೋಡಿಸಿದೆ. ಭಾರತ ಹಾಗೂ ಅಮೆರಿಕದಲ್ಲಿ ಉತ್ತಮ ಸಂಶೋಧಕರಿದ್ದು, ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಒಳ್ಳೆಯ ಸ್ನೇಹಿತ ಎಂದಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಒಂದೊಮ್ಮೆ ಹೈಡ್ರೊಕ್ಸಿಕ್ಲೋರೊಕ್ವಿನ್ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದ ಟ್ರಂಪ್ , ಭಾರತವು 29 ಮಿಲಿಯನ್ ಡೋಸ್‌ಗಳನ್ನು ಅಮೆರಿಕಕ್ಕೆ ನೀಡಲು ಒಪ್ಪಿದ ಬಳಿಕ ಶಾಂತವಾಗಿದ್ದರು. ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ 3 ಲಕ್ಷ ಮಂದಿ ಮೃತಪಟ್ಟಿದ್ದಾರೆ. 44 ಲಕ್ಷ ಮಂದಿ ಕೊರೊನಾದಿಂದ ನರಳುತ್ತಿದ್ದಾರೆ. ಅಮೆರಿಕದಲ್ಲಿ ಈಗಾಗಲೇ 80 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights