ಕ್ಯಾಂಡಲ್ ಲೈಟ್ ಕರೆಗೆ ನಟ ಅಕ್ಷಯ್ ಕುಮಾರ್ ವರ್ತನೆ ಹೇಗಿರುತ್ತೆ: ಸೋಷಿಯಲ್ ಮೀಡಿಯಾ ಟ್ರೋಲ್
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ದೇಶದ ಜನರನ್ನುದ್ದೇಶಿಸಿ ವಿಡಿಯೋ ಮೂಲಕ ಹಲವಾರು ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ದೇಶದ ಜನರು ಭಾನುವಾರ ರಾತ್ರಿ 09 ಗಂಟೆಗೆ ತಮ್ಮ ಮನೆಗಳ ಲೈಟ್ಗಳನ್ನು ಆಫ್ ಮಾಡಿ ಮನೆಯ ಬಾಲ್ಕಾನಿಯಲ್ಲಿ ಕ್ಯಾಂಡಲ್ ಹಚ್ಚಿ ಅಥವಾ ಮೊಬೈಲ್ ಟಾರ್ಚ್ ಮೂಲಕ ಬೆಳಗಿಸಿ ಎಂದು ಕರೆ ನೀಡಿದ್ದಾರೆ.
ತಮ್ಮ ವಿಡಿಯೋ ಸಂದೇಶದಲ್ಲಿ ಜನರಿಗೆ ಉಪಯುಕ್ತವಾಗುವ ಯಾವುದೇ ಕಾರ್ಯಯೋಚನೆಗಳಿಲ್ಲದ ಮೋದಿಯವರ ಕ್ಯಾಂಡಲ್ ಲೈಟ್ ಕರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ, ಟೀಕೆಗಳು, ವಿರೋಧಗಳು ಬಾರೀ ಟ್ರೋಲ್ ಆಗುತ್ತಿವೆ.
ಕಳೆದ ಮಾರ್ಚ್ 23 ರಂದು ಮೋದಿಯವರು ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿ, ಜನರಿಗೆ ಬಾಲ್ಕನಿಯಲ್ಲಿ ಚಪ್ಪಾಳೆ ತಟ್ಟುವಂತೆ ಮನವಿ ಮಾಡಿದ್ದರು. ಪ್ರಧಾನಿಯ ನಿರೀಕ್ಷೆಗೂ ಮೀರಿದಂತೆ ಜನರು ತಮ್ಮ ತಟ್ಟೆ ಲೋಟ, ಚಾಗಟೆ ಬಳಸಿ ದುಂಡಾವರ್ತನೆ ಪ್ರದರ್ಶಿಸಿ ಸಾಮಾಜಿಕ ಅಂತರವೂ ಇಲ್ಲದೆ, ಜನತಾ ಕರ್ಫ್ಯೂವಿನ ಮೋದಿ ಕರೆಗೆ ಅವಮಾನಕರವಾಗಿ ಮಾಡಿದ್ದರು.
ಇದರಲ್ಲಿ ಕರ್ನಾಟಕದ ರಾಜ್ಯಪಾಲರೂ ಹೊರತಾಗಿರಲಿಲ್ಲ. ಅಲ್ಲದೆ, ನಟ ಅಕ್ಷಯ್ ಕುಮಾರ್ ತಮ್ಮ ನೆರೆಹೊರೆಯವರೊಂದಿಗೆ ಬೀದಿಯಲ್ಲಿ ನಿಂತು ತಟ್ಟೆ, ಸೌಟು ಹಿಡಿದು ಗದ್ದಲ ಎಬ್ಬಿಸಿ, ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
Akshay Kumar on April 5, 2020, at 9 PM. pic.twitter.com/aMnaDr8nsb
— V (@ivivek_nambiar) April 3, 2020
ಒಬ್ಬ ಸ್ಟಾರ್ ನಟ ತನ್ನ ಅಯೋಗ್ಯತನವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದನ್ನು ನೋಡಿದ್ದ ಸೋಷಿಯಲ್ ಮೀಡಿಯಾ ಟ್ರೋಲಿಗರು ಏಪ್ರಿಲ್ 05ರ ಭಾನುವಾರ ರಾತ್ರಿ 09 ಗಂಟೆಗೆ ಮೋದಿಯವರ ಕ್ಯಾಂಡಲ್ ಲೈಟ್ ಕರೆಗೆ ಅಕ್ಷಯ್ ಹೇಗೆ ಸ್ಪಂದಿಸಬಹುದು, ಅವರ ಅಂದಿನ ಆಟಿಟ್ಯೂಡ್ ಹೇಗಿರುತ್ತದೆ ಎಂದು ಟ್ವಿಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
https://twitter.com/retheeshraj10/status/1245944413194530817?s=20
ಅಲ್ಲದೆ, ಜನತಾ ಕರ್ಫ್ಯೂ ದಿನ ಮೋದಿಯ ಅಭಿಮಾನಿಗಳು ಮೋದಿಯವರ ಚಪ್ಪಾಳೆಯ ಕರೆಗೆ ಗುಂಪು ಕಟ್ಟಿಕೊಂಡು ತಗಡುಗಳ ಶೀಟ್ಗಳನ್ನು ಭಾರಿಸಿ, ತಟ್ಟೆ,ಲೋಟ, ಚೊಂಬುಗಳನ್ನು ಹಿಡಿದು ಅವು ಹಾಳಾಗುವವರೆಗೂ ಭಾರಿಸಿದ್ದರು. ಇಂತಹ ದುಂಡಾವರ್ತನೆಯ ಅಂಧ ಭಕ್ತರು ಕ್ಯಾಂಡಲ್ ಲೈಟ್ ಕರೆಗೆ ಹೇಗೆಲ್ಲಾ ವರ್ತಿಸಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

