ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಹೋಟೆಲ್ಸ್, ಶಾಪಿಂಗ್ ಮಾಲ್ಗಳು ಓಪನ್….!
ಜೂನ್ ಒಂದರಿಂದ ಲಾಕ್ ಡೌನ್ 5.0 ಜಾರಿಯಾಗಲಿದ್ದು ಷರತ್ತು ಬದ್ಧ ಸಡಿಲಿಕೆಯೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ ಧಾರ್ಮಿಕ ಕ್ಷೇತ್ರಗಳಿಗೆ ಇದೇ ಜೂನ್ ಒಂದರಿಂದಲೇ ಪೂಜೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇತ್ತು. ಆದರೆ ಸರ್ಕಾರ ಜೂನ್ 8 ರಿಂದ ಚರ್ಚ್, ದೇವಾಲಯಗಳು, ಮಸೀದ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಇದಕ್ಕೆ ಕೆಲ ಷರತ್ತುಗಳನ್ನೂ ವಿಧಿಸುವ ಸಾದ್ಯತೆ ಇದೆ.
ಹೌದು… ಇಂದಿಗೆ ಕೊರೊನಾ ಲಾಕ್ ಡೌನ್ 4.0 ಮುಗಿಯಲಿದೆ. ನಾಳೆಯಿಂದ 5.0 ಜಾರಿಯಾಗಲಿದ್ದು ಕೆಲ ಕ್ಷೇತ್ರಗಳನ್ನು ಸಡಿಲಗೊಳಿಸುವ ಸಾಧ್ಯತೆ ಕೂಡ ಇದೆ. ಕೇಂದ್ರ ಸರ್ಕಾರ ಜೂನ್ 30 ವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಮಾರ್ಗಸೂಚಿಗಳ ಅನ್ವಯ ಜೂನ್ 8 ರಿಂದ ಚರ್ಚ್, ಮಸೀದ್, ದೇವಾಲಯಗಳು ಮಾತ್ರವಲ್ಲದೇ ಹೊಟೆಲ್ ಕೂಡ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಧಾರ್ಮಿಕ ಸ್ಥಳಗಳು ಹಾಗೂ ಹೋಟೆಲ್, ಶಾಪಿಂಗ್ ಮಾಲ್ ಗಳನ್ನು ತೆರೆಯಲು ಕೆಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಹ್ಯಾಂಡ್ ಸಾನಿಟೈಸರ್ ಕಡ್ಡಾಯವಾಗಲಿದೆ. ಜೊತೆಗೆ ಸಮಯ ನಿಗಧಿ ಮಾಡುವ ಸಾಧ್ಯತೆ ಇದೆ.
ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಪಾರ್ಸೆಲ್ ವಿತರಣೆಗೆ ಅವಕಾಶ ನೀಡಲಾಗಿದ್ದು ಇನ್ನು ಮುಂದೆ ಕುಳಿತು ತಿನ್ನುವುದಕ್ಕೂ ಅವಕಾಶ ನೀಡಲಾಗುತ್ತದೆ. ರೆಸಾರ್ಟ್ ಸೇರಿ ಇನ್ನಿತರೆ ಆತಿಥ್ಯ ಸೇವೆಗಳು ತೆರೆಯಬಹುದು. ಈ ವಾರ ಹೋಟೆಲ್ ಗಳು ಯಾವೆಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾರ್ಗಸೂಚಿ ಪ್ರಕಟವಾಗಲಿದೆ.
ಜೊತೆಗೆ ಶಾಪಿಂಗ ಮಾಲ್ ಗಳಿಗೂ ಜೂನ್ 8 ರಿಂದ ತೆರೆಯಲು ಅವಕಾಶ ನೀಡಲಾಗಿದ್ದು, ಕೆಲ ಷರತ್ತುಗಳು ಕಡ್ಡಾಯವಾಗಿ ಅನ್ವಯವಾಗಲಿವೆ.

