ಜೂನ್ನಿಂದ ಮತ್ತೆ ಆರಂಭಗೊಳ್ಳಲಿವೆ ನಿಮ್ಮ ನೆಚ್ಚಿನ ಧಾರಾವಾಹಿಗಳು!
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ಡೌನ್ನಿಂದಾಗಿ ಎಲ್ಲಾ ಭಾಷೆಯ ಕಿರುತೆರೆಯ ಧಾರಾವಾಹಿಗಳು ಚಿತ್ರೀಕರಣವಾಗದೇ ಬಂದ್ ಆಗಿದ್ದವು. ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರವೂ ಭಾಗಶಃ ಎಲ್ಲಾ ರೀತಿಯ ಚಟುವಟಿಕೆಗಳಿಗೂ ನಿರ್ಬಂಧ ಹೇರಿತ್ತು. ಹಾಗಾಗಿ ಕನ್ನಡದ ಧಾರಾವಾಹಿಗಳು ಬಂದ್ ಆಗಿದ್ದವು.
ಮೂರನೇ ಹಂತದ ಲಾಕ್ಡೌನ್ ನಂತರ ಹಲವಾರು ಸಡಿಲಿಕೆಗಳನ್ನು ನೀಡಲಾಗಿದ್ದು, ಕರ್ನಾಟಕ ಸರ್ಕಾರ, ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ.
ಹಾಗಾಗಿ, ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದ್ದು, ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಸಾಕಷ್ಟು ಎಪಿಸೋಡ್ಗಳ ಚಿತ್ರೀಕರಣವಾಗಿರುವುದರಿಂದಾಗಿ ಜೂನ್ 1ರಿಂದ ಕನ್ನಡದ ಧಾರಾವಾಹಿಗಳು ಮತ್ತೆ ಟಿವಿಗಳಲ್ಲಿ ರಾರಾಜಿಸಲಿವೆ.
ಎಲ್ಲಾ ವಾಹಿನಿಗಳಲ್ಲಿಯೂ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈಗಾಗಲೇ ಲಾಕ್ಡೌನ್ ಸಂದರ್ಭದಲ್ಲಿ ಹಲವು ವಾಹಿನಿಗಳು ಧಾರಾವಾಹಿಗಳು ಪ್ರಸಾರವಾಗುವ ಸಮಯವನ್ನು ಬದಲು ಮಾಡಿದ್ದವು. ಆ ಬದಲಾವಣೆಗಳು ಹಾಗೆಯೇ ಮುಂದುವರೆಯಲಿದ್ದು, ಸಂಜೆ 06 ಗಂಟೆಯಿಂದ ರಾತ್ರಿ 11 ರವರೆಗೆ ಎಲ್ಲಾ ಧಾರವಾಹಿಗಳು ಪ್ರಸಾರವಾಗಲಿವೆ.

