ತಿಮ್ಮಪ್ಪನಿಗು ಕಂಟಕವಾದ Lock down : ಆಸ್ತಿ ಮಾರಲು ಮುಂದಾದ ದೇವಸ್ಥಾನ ಮಂಡಳಿ..

’ವೆಂಕಟ ಇನ್ ಸಂಕಟ’  ಹೌದು  ಪ್ರಪಂಚದ ಅತ್ಯಂತ ಶ್ರೀಮಂತ ದೇವರು ತಿಮ್ಮಪ್ಪನಿಗು lock down ಕಂಟಕವಾಗಿದೆ.. ಬತ್ತಿದ ಆದಾಯದಿಂದ  ಕಂಗೆಟ್ಟಿರುವ ತಿರುಪತಿ ದೇವಸ್ಥಾನ ಮಂಡಳಿ ಆಸ್ತಿ ಮಾರಲು ಮುಂದಾಗಿದೆ.. ಲಾಕ್‌ಡೌನ್ ಕಾರಣ ಬತ್ತಿದ ಆದಾಯ, ಜೋಳಿಗೆ ತುಂಬಿಸಲು ತಿರುಪತಿ ದೇಗುಲ ಆಸ್ತಿ ಮಾರಾಟ ಮಾಡಲೇಬೇಕಾಗಿದೆ ಎನ್ನುತ್ತಿದೆ ಆಡಳಿರ ಮಂಡಳಿ..

ಒಂದೂವರೆ ತಿಂಗಳ ಲಾಕ್‌ಡೌನ್‌ ಕಾರಣ ಉಂಟಾಗಿರುವ ನಷ್ಟ ಸರಿದೂಗಿಸುವುದು ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯಕ್ಕೂ ಕಷ್ಟಸಾಧ್ಯವಾಗಿದೆ.  ಅನುಭವಿಸಿದ ನಷ್ಟವನ್ನು ತುಂಬಿಕೊಳ್ಳಲು ತಿರುಪತಿ ದೇವಸ್ಥಾನ ಮಂಡಳಿಯು ಆಸ್ತಿ ಮಾರಾಟಕ್ಕೆ ಮುಂದಾಗಿರುವ ಅಂಶ ಬಯಲಾಗಿದೆ.

ತಿರುಪತಿ ದೇವಾಲಯದ ತಿಂಗಳ ಖರ್ಚು 150 ಕೋಟಿ ಆದರೆ ಆದಾಯ 200 ಕೋಟಿ ರೂ. ಆದರೆ ಕಳೆದ ಎರಡು ತಿಂಗಳಿಂದ ಆದಾಯವೇ ಇಲ್ಲದೇ ಬರೀ ಖರ್ಚೇ ಹೆಚ್ಚಾಗಿದೆ. ಇದರಿಂದ ಪಾರಾಗಲು ದಾನಿಗಳಿಂದ ಬಂದಿರುವ ಆಸ್ತಿ (ಭೂಮಿಯೂ ಸೇರಿ) ಮಾರಾಟ ಮಾಡುವ ಚಿಂತನೆಯನ್ನು ಆಡಳಿತ ಮಂಡಳಿ ನಡೆಸಿದೆ..

ತಿಮ್ಮಪ್ಪನ ಆಸ್ತಿ ಅದೆಷ್ಟೋ ಕೋಟಿ ಇದ್ದರೂ ಸದ್ಯ ಆಸ್ತಿ ಮಾರಾಟದಿಂದ ಸುಮಾರು 500 ಕೋಟಿಯಷ್ಟು ಮೊತ್ತವನ್ನು ಹೊಂದಿಸುವುದು ದೇವಾಲಯ ಆಡಳಿತ ಮಂಡಳಿಯ ಚಿಂತನೆಯಾಗಿದೆ.  ಎಂಟು ಟನ್ ಚಿನ್ನ, 14 ಸಾವಿರ ಕೋಟಿ ರೂ ಠೇವಣಿ ಹೊಂದಿರುವ ತಿಮ್ಮಪ್ಪ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿದೆ..  ತಿರುಪತಿ ದೇಗುಲದ ವಾರ್ಷಿಕ ಆದಾಯ ಸುಮಾರು 2 ಸಾವಿರ ಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ.

ಈ ಮಧ್ಯೆ ಲಾಕ್‌ಡೌನ್ ಕಾರಣ ಕಳೆದ ಮಾರ್ಚ್ ತಿಂಗಳ ಮಧ್ಯಭಾಗದಿಂದ ಬಂದಾಗಿರುವ ದೇವಸ್ಥಾನದಲ್ಲಿ ಮತ್ತೆ ಸಾರ್ವಜನಿಕ ದರ್ಶನಕ್ಕೆ ಶೀಘ್ರವೇ ಅವಕಾಶ ಲಭಿಸುವ ಬಗ್ಗೆ ಮಂಡಳಿ ಆಶಾಭಾವದಲ್ಲಿದೆ. ಮೇ. 18ರ ಬಳಿಕ ಇತಿಮಿತಯೊಳಗೆ ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅನುಮತಿ ಸಿಗುವ ಬಗ್ಗೆ ಆಡಳಿತ ಮಂಡಳಿ ನಿರೀಕ್ಷೆ ಹೊಂದಿದೆ.

ನಿತ್ಯ ಸುಮಾರು 40-50 ಸಾವಿರ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಈಗ ದೇಗುಲ ಪುನಾರಂಭವಾದರೇ ಭಕ್ತರ ಸಂಖ್ಯೆಯನ್ನು ನಿತ್ಯ 10 ಸಾವಿರಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ. ಪ್ರತಿನಿತ್ಯ ಬರುವ ಭಕ್ತರ ಸಂಖ್ಯೆ ಮಿತಗೊಳಿಡುವ ಉದ್ದೇಶದಿಂದ ದಿನಕ್ಕೆ ಇಂತಿಷ್ಟೇ ಜನಕ್ಕೆಂದು ಟೋಕನ್ ವ್ಯವಸ್ಥೆ ಜಾರಿ ಮಾಡುವ ಬಗ್ಗೆಯೂ ಮಂಡಳಿ ಚಿಂತನೆ ನಡೆಸಿದೆ. ಅಲ್ಲದೇ ದೇವಾಲಯಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಸಕಲ ವ್ಯವಸ್ಥೆಯನ್ನೂ ಆಡಳಿತ ಮಂಡಳಿ ಈಗಾಗಲೇ ಮಾಡಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights