ದೇಶಾದ್ಯಂತ ರೈಲು ಸೇವೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ರೈಲ್ವೇ ಇಲಾಖೆ; ಯಾವಾಗಿಂದ ಆರಂಭ

ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸೇವೆಗಳನ್ನು ಮೆ.12 ರಿಂದ ಪುನರಾರಂಭ ಮಾಡಲಿದೆ.

30 ರೈಲುಗಳು ಸಂಚರಿಸಲಿದ್ದು, ನವದೆಹಲಿಯಿಂದ ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು  ನಡುವೆ ಸಂಚರಿಸಲಿದೆ.

ಕೊರೋನಾ ವೈರಸ್ ಹಿನ್ನೆಲೆ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಮಾ.25 ರಿಂದ ರದ್ದುಗೊಳಿಸಲಾಗಿತ್ತು. ಮೇ.12 ರಿಂದ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದ ಬಳಿಕ ರೈಲ್ವೆ ಇಲಾಖೆ  ಕ್ರಮೇಣ ಹೊಸ ಮಾರ್ಗಗಳಿಗೆ ರೈಲುಗಳ ಸಂಚಾರವನ್ನು ಪ್ರಾರಂಭಿಸಲಿದೆ. ಮೇ.11 ರಂದು ಸಂಜೆ 4 ರಿಂದ ರೈಲ್ವೆ ಟಿಕೆಟ್ ಗಳನ್ನು https://www.irctc.co.in/ ನಲ್ಲಿ ಕಾಯ್ದಿರಿಸಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights