ಪಾದರಾಯನಪುರ : ರಾಮನಗರ ಜೈಲಲ್ಲಿದ್ದ 121 ಮಂದಿ 5ರಿಗೆ ಸೋಂಕು, ಎಲ್ಲರೂ ಬೆಂಗಳೂರಿಗೆ..

ತೀವ್ರ ವಿರೋಧದ ನಡುವೆಯೇ ರಾಮನಗರ ಜೈಲಿನಲ್ಲಿರಿಸಲಾಗಿದ್ದ ಪಾದರಾಯನಪುರ ಗಲಭೆಕೋರರ ದಂಡಲ್ಲಿ ಐವರಿಗೆ ಕೊರೋನಾ ಸೋಂಕು ತಗುಲಿದೆ. ಇದು ಆತಂಕ್ಕೆ ಕಾರಣವಾಗಿದೆ.  ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದ ಎಲ್ಲ ಗಲಭೆಕೋರರನ್ನೂ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. 116 ಗಲಭೆಕೋರರು ಸೇರಿದಂತೆ ಜೈಲಿನಲ್ಲಿದ್ದ 133 ವಿಚಾರಣಾಧೀನ ಕೈದಿಗಳನ್ನು ಏಳು ಬಸ್ಸುಗಳಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಪಾದರಾಯನಪುರದಲ್ಲಿ ಗಲಭೆಗೆ ಕಾರಣರಾಗಿದ್ದ 121 ಮಂದಿಯನ್ನು ರಾಮನಗರ ಜೈಲಿನಲ್ಲಿ ಇರಿಸಲಾಗಿತ್ತು. ಇವರ ಪೈಕಿ ಮೊದಲೇ ಇಬ್ಬರಿಗೆ ಸೋಣಕು ಇತ್ತು.ಲ ಈಗ ಸೋಂಕಿತರ ಸಂಖ್ಯೆ 5ಕ್ಕೇರಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಇವರನ್ನು ನಗರದ ಹಜ್ ಭವನದಲ್ಲಿ ಇರಿಸಲಾಗುತ್ತದೆ ಎಂದು ಹೆಳಲಾಗಿದೆ.  ಈ ಮಧ್ಯೆ ಗಲಭೆಕೋರರನ್ನು ರಾಮನಗರ ಜೈಲಿಗೆ ಕರೆತಂದದ್ದರ ವಿರುದ್ಧ ಜೈಲಿನ ಸಿಬ್ಬಂದಿಯೂ ಸೇರಿದಂತೆ ಸ್ಥಳೀಯರು ಗುರುವಾರ ರಾತ್ರಿ ಕಾರಾಗೃಹದ ಮುಮದೆಯೇ ಪ್ರತಿಭಟನೆ ನಡೆಸಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವ ಸರಕಾರದ ಕ್ರಮದ ವಿರುದ್ಧ ಕೆಂಡ ಕಾರಿದ್ದರು. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ.

ಸರ್ಕಾರ ತಡಮಾಡದೆ ರಾಮನಗರ ಜೈಲಿನಲ್ಲಿರುವ ಕೈದಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಎಚ್ಡಿಕೆ ಆಗ್ರಹ ಮಾಡಿದ್ದರು. ಸರ್ಕಾರದ ಅವಿವೇಕದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದೂ ಕುಮಾರಸ್ವಾಮಿ ಹೇಳಿದ್ದರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights