ಮಣಿಪುರದ ಉಕ್ರುಲ್ ಭೂಕಂಪ : 3.6 ತೀವ್ರತೆಯಲ್ಲಿ ಕಂಪಿಸಿದ ಭೂಮಿ…
ಕೊರೊನಾ ಆಂತಕದಲ್ಲೇ ಒಂದು ಕಡೆ ಅಂಫಾನ್ ಚಂಡುಮಾರುತ ಇನ್ನೊಂದೆಡೆ ಭೂಕಂಪನ ಜನರನ್ನು ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.
ಹೌದು…. ಮಣಿಪುರದಲ್ಲಿ ಕೊರೊನಾ ಸೋಂಕಿತರ ಸಂಝ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಭೂಮಿ ಕಂಪಿಸಿದೆ. ಭೂಕಂಪವು ಆರಂಭದಲ್ಲಿ 3.6 ತೀವ್ರತೆಯಲ್ಲಿ ದಾಖಲಾಗಿದ್ದು, ಶುಕ್ರವಾರ ಮುಂಜಾನೆ 3: 26 ರ ಸುಮಾರಿಗೆ ಮಣಿಪುರದ ಉಕ್ರುಲ್ ಪೂರ್ವಕ್ಕೆ ನಡುಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ವರದಿ ಮಾಡಿದೆ.
“ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪನವು ಇಂದು ಬೆಳಿಗ್ಗೆ 03:26 ಕ್ಕೆ ಮಣಿಪುರದ ಉಕ್ರುಲ್ ನಿಂದ ಪೂರ್ವಕ್ಕೆ 43 ಕಿ.ಮೀ.ಗೆ ಅಪ್ಪಳಿಸಿದೆ” ಎಂದು ಎನ್ಸಿಎಸ್ ಮರದಿ ಮಾಡಿದೆ.
ಕೆಲವು ಸೆಕೆಂಡುಗಳ ಕಾಲ ನಡೆದ ಭೂಕಂಪನದಿಂದಾಗಿ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.

