ಮರಳಿನ ದಿಬ್ಬ ಕುಸಿದು ಮೂರು ಮಕ್ಕಳ ದಾರುಣ ಸಾವು…!

ಮರಳಿನ ದಿಬ್ಬ ಕುಸಿದು ಮೂರು ಮಕ್ಕಳ ದಾರುಣ ಸಾವನ್ನಪ್ಪಿದ ಘಟನೆ ಕೊಪ್ಪಳದ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ನಡೆದಿದೆ.ಮಹಾರಾಷ್ಟ್ರ ಮೂಲದ ಅಲೆಮಾರಿ ಜನಾಂಗದ ಕುಟುಂಬ ಕೂಲಿ ಕೆಲಸಕ್ಕಾಗಿ ಕೋಲಾರಕ್ಕೆ ಬಂದಿದ್ದರು.

ಮರಳು ಮಾಫಿಯಾಕ್ಕೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ. ಆಟವಾಡಿಕೊಂಡು ಮರಳಿನ ಗುಡ್ಡದೊಳಗೆ ಹೋಗಿದ್ದ  ಸೋನಂ (7) ಸವಿತಾ(4) ಹಾಗೂ ಕವಿತಾ (2) ಮೃತಪಟ್ಟಿದ್ದಾರೆ. ರೋಷನ್, ಕಿರಣ್, ಬಾಬು ಎಂಬ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನವಲಿ ಹಳ್ಳದಲ್ಲಿ ಗುಣಮಟ್ಟದ ಮರಳಿಗಾಗಿ ದಂಧೆಕೋರರು ಗುಡ್ಡ ನಿರ್ಮಿಸಿದ್ದಾರೆ. ಮರಳಿನ ಗುಡ್ಡ ಗವಿಯಾಕಾರದಲ್ಲಿ ಇದ್ದುದರಿಂದ ಆಟವಾಡಲು ಮಕ್ಕಳು ಒಳ ಹೋಗಿದ್ದರು. ಆಗ ಗುಡ್ಡ ಕುಸಿದು ಸ್ಥಳದಲ್ಲೇ ಮೂರು ಮಕ್ಕಳ ಸಾವನ್ನಪ್ಪಿದ್ದಾರೆ. ಮೂರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಇತರೆಡೆ ಮರಳು ಸಾಗಿಸುವಾಗ ಗುಡ್ಡ ಕುಸಿದು ಕಾರ್ಮಿಕರು ಸಾವಿಗೀಡಾದ ನಿದರ್ಶನಗಳಿವೆ.  ಆದರೆ ದಂಧೆಕೋರರು ಮಾಡಿದ ತಪ್ಪಿಗೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಾಕರು ಕಣ್ಣೀರುತ್ತಿದ್ದಾರೆ. ಸ್ಥಳಕ್ಕೆ ಕನಕಗಿರಿ ಪೊಲೀಸರು ದಾವಿಸಿದ್ದು ವಿಚಾರಣೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights