ರಸ್ತೆ ಅಪಘಾತ: ನಾಲ್ವರು ವಲಸೆ ಕಾರ್ಮಿಕರ ಸಾವು; 22 ಮಂದಿಗೆ ಗಾಯ

ಬಸ್ಸು ಮತ್ತು ಟ್ರಕ್‌ ನಡುವೆ ಅಫಘಾತ ಸಂಭವಿಸಿದ್ದು, ನಾಲ್ವರು ವಲಸೆ ಕಾರ್ಮಿಕರು ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬಸ್ಸು ಮತ್ತು ಟ್ರಕ್‌ಗಳು ಪರಸ್ಪರ ಡಿಕ್ಕಿ ಹೊಹೊಡೆ ಬಸ್‌ನಲ್ಲಿದ್ದ ಕಾರ್ಮಿಕರಲ್ಲಿ ನ್ವರು ಮೃತಪಟ್ಟಿದ್ದು,  22 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಯವತ್ಮಲ್ ನಲ್ಲಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಿಂದ ಜಾರ್ಖಂಡ್‌ಗೆ ಬಸ್ಸು ಸಂಚರಿಸುತ್ತಿತ್ತು. ಇಂದು ನಸುಕಿನ ಜಾವ 3.30 ಸುಮಾರಿಗೆ ಸೋಲಾಪುರದಿಂದ ನಾಗ್ಪುರ ರೈಲ್ವೆ ನಿಲ್ದಾಣಕ್ಕೆ ಕಾರ್ಮಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ನಾಗ್ಪುರ ರೈಲು ನಿಲ್ದಾಣದಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ ತಮ್ಮೂರು ಜಾರ್ಖಂಡ್ ಗೆ ಹೋಗಲು ಹೊರಟಿದ್ದರು ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ನೂರುಲ್ ಹಸನ್ ತಿಳಿಸಿದ್ದಾರೆ.

ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಇದು  ಆಕಸ್ಮಿಕ ಸಾವು ಎಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಿಹಾರದಲ್ಲಿ 9 ವಲಸೆ ಕಾರ್ಮಿಕರ ಸಾವು: ಬಿಹಾರದ ಭಗಲ್ಪುರದಲ್ಲಿ ಇಂತಹದ್ದೇ ಘಟನೆ ನಡೆದಿದ್ದು ಟ್ರಕ್ ಮತ್ತು ಬಸ್ ಢಿಕ್ಕಿಯಾಗಿ 9 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಟ್ರಕ್ ಬಸ್ಸಿಗೆ ಢಿಕ್ಕಿ ಹೊಡೆದು ರಸ್ತೆಯಿಂದ ಕೆಳಗೆ ಬಿದ್ದಿದೆ, ಇದರಲ್ಲಿ ಹತ್ತಾರು ಕಾರ್ಮಿಕರಿಗೆ ಗಾಯವಾಗಿದೆ. ಭಗಲ್ಪುರದ ನೌಗಚ್ಚಿಯಾದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ರಕ್ಷಣಾ ಕಾರ್ಯ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights