ರೆಬೆಲ್ ಸ್ಟಾರ್ , ಕ್ರೇಜಿಸ್ಟಾರ್ ಗೆ ವಿಶ್ ಮಾಡದ ರಾಕಿಂಗ್ ಸ್ಟಾರ್ : ಮುನಿಸಿಕೊಂಡ್ರಾ ಅಭಿಮಾನಿಗಳು?
ಜೋಡಿ ಎತ್ತುಗಳು ಅಂದ ತಕ್ಷಣ ನೆನಪಾಗೋದು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್. ರೆಬೆಲ್ ಸ್ಟಾರ್ ಅಂಬರೀಷ್ ಅವರ ಆಪ್ತರೆಂದು ಕರೆಸಿಕೊಳ್ಳುವ ಇಬ್ಬರು ಸ್ಟಾರ್ ಗಳ ಪೈಕಿ ಒಬ್ಬರ ಮೇಲೆ ಅಂಬರೀಷ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.
ಹೌದು… ರಾಕಿಂಗ್ ಸ್ಟಾರ್ ಯಶ್ ಅವರ ಮೇಲೆ ಅಂಬಿ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಕಳೆದ ಮೇ 29 ರಂದು ಅಂಬರೀಷ್ ಅವರ ಹುಟ್ಟುಹಬ್ಬವಿತ್ತು. ಅಂಬಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರೆಲ್ಲಾ ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ, ಮಗ ಅಭಿಷೇಕ್ ಅವರ 2ನೇ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಬಹುತೇಕ ಎಲ್ಲಾ ಸ್ಯಾಂಡಲ್ ವುಡ್ ತಾರೆಯರು ಅಂಬಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ್ದರು. ಆದರೆ ಯಶ್ ಮಾತ್ರ ಈ ಬಾರಿ ಅಂಬಿರೀಷ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿರುವುದು ಕಂಡುಬಂದಿಲ್ಲ.
ಈ ವಿಚಾರ ಅಂಬಿ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಅಂಬರೀಷ್ ಮಾತ್ರವಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬಕ್ಕೂ ಯಶ್ ವಿಶ್ ಮಾಡಿಲ್ಲ. ಹೀಗಾಗಿ ರವಿಮಾಮನ ಅಭಿಮಾನಿಗಳೂ ಮುನಿಸಿಕೊಂಡಿದ್ದಾರೆ. ಆದರೆ ಯಶ್ ಮಾತ್ರ ಒಂದು ತಿಂಗಳಿಂದ ಸಾಮಾಜಿಕ ಜಾಲತಾಣದಿಂದ ದೂರವಿದ್ದಾರೆಂದು ಹೇಳಲಾಗುತ್ತಿದೆ.

