ಲಾಕ್ ಡೌನ್ ನಿಂದಾಗಿ ಮತ್ತೆ ಹೊಸತನದಿಂದ ಜೀವತಳಿದ ಪ್ರಕೃತಿ : ಶುದ್ಧಗೊಂಡ ಗಂಗೆ
ಕೋವಿಡ್-19 ಇಡೀ ದೇಶದ ಆರ್ಥಿಕ ಕುಸಿದು ಜನ ಮನೆಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಆದರೆ ಲಾಕ್ ಡವನ್ ನಿಂದಾಗಿ ಪ್ರಯೋಜನವೇನಾದ್ರು ಆಗಿದ್ದರೆ ಅದು ಪ್ರತಿನತ್ಯ ಹಲುಷಿತಗೊಳ್ಳುತ್ತಿದ್ದ ಗಾಳಿ ಹಾಗೂ ನೀರಿಗೆ.
ಹೌದು… ದೇಶದಲ್ಲಿ ಪ್ರತಿನಿತ್ಯ ಬೀದಿಗಿಳಿಯುವ ವಾಹನಗಳಿಂದ, ಫ್ಯಾಕ್ಟರಿಯಾ ತ್ಯಾಜ್ಯದಿಂದ ನೀರು ಹಾಗೂ ಗಾಳಿ ಕಲುಷಿತಗೊಳ್ಳುತ್ತಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಜನ ಮನೆ ಬಿಟ್ಟು ಹೊರಬಾರದಂತಾಗಿ ಗಾಳಿ ಹಾಗೂ ನೀರು ಶುದ್ಧಗೊಂಡಿದೆ. ಇದರಿಂದ ಪ್ರಕೃತಿ ಮತ್ತೆ ಹೊಸತನದಿಂದ ಜೀವತಳಿದಿರುವುದನ್ನು ನಾವು ಕಾಣಬಹುದು.
ಪ್ರಕೃತಿ, ಪ್ರಾಣಿ ಪಕ್ಷಿಗಳ ನೆಮ್ಮದಿಯ ಹಾರಾಟದ ಜೊತೆಗೆ ದೇವನದಿ ಗಂಗೆಯೂ ಪರಿಶುದ್ಧಳಾಗಿದ್ದಾಳೆ. ವಾರಾಣಸಿ-ಹರಿದ್ವಾರದ ಮೂಲಕ ಹರಿಯುವ ದೇವನದಿ ಗಂಗೆ ಲಾಕ್ ಡೌನ್ ಪರಿಣಾಮವಾಗಿ ಮತ್ತಷ್ಟು ಸ್ವಚ್ಛಗೊಂಡಿದ್ದು, ಗಾಂಗಾನದಿಯ ನೀರು ಹಿಂದೆಂದಿಗಿಂತಲೂ ಉತ್ತಮವಾಗಿದೆ.
ಮಾ.24 ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಣೆ ಮಾಡಿದಾಗಿನಿಂದಲೂ ಕೈಗಾರಿಕೆಗಳು ಮುಚ್ಚುವೆ. ಲಾಕ್ ಡೌನ್ ನಿಂದಾಗಿ ಪ್ರತಿ ದಿನವೂ ಗಂಗಾ ನದಿಗೆ ಸೇರುತ್ತಿದ್ದ ತ್ಯಾಜ್ಯಗಳು ಈಗ ಸ್ಥಗಿತಗೊಂಡಿವೆ. ಇದರಿಂದ ಉಂಟಾಗಿರುವ ಪರಿಣಾಮವನ್ನು ವಿಜ್ಞಾನಿಗಳು ಗಮನಿಸಿದ್ದು, ಗಂಗಾ ನದಿ ನೀರಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಕುಡಿಯುವುದಕ್ಕೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಲಾಕ್ ಡೌನ್ ಅಂತ್ಯಗೊಳ್ಳಲು ಮೇ 3 ರವರೆಗೂ ಸಮಯವಿದ್ದು ಗಂಗೆ ಮತ್ತಷ್ಟು ಶುದ್ಧಗೊಳ್ಳುವ ಸಾಧ್ಯತೆ ಇದೆ.

