ವಿಶ್ವ ಆನೆ ದಿನ: ಆನೆಗಳ ಸಂರಕ್ಷಣೆಗೆ ಪ್ರತಿಜ್ಞೆ ಮಾಡಲು ಕರೆಕೊಟ್ಟ ನಟ ದರ್ಶನ್‌!

ಆಗಸ್ಟ್‌ 12ನ್ನು ವಿಶ್ವ ಆನೆ ದಿನ ಎಂದು ಆಚರಿಸಲಾಗುತ್ತಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಆನೆಗಳ ಸಾವುಗಳು ಹೆಚ್ಚಾಗುತ್ತಿಲೇ ಇವೆ. ಒಂದೆಡೆ, ಆನೆಗಳು ಸಹಜ ಸಾವಿಗೆ ತುತ್ತಾಗುತ್ತಿದ್ದರೆ, ಮೊತ್ತೊಂದೆಡೆ, ಮನುಷ್ಯನ ಅನಾಗರಿಕ ವರ್ತನೆಯಿಂದ ಸಾವನ್ನಪ್ಪುತ್ತಿವೆ.

ಕಳೆದ ಸುಮಾರು ದಿನಗಳ ಹಿಂದೆ ಕೇರಳದಲ್ಲಿ ಸಿಡಿಮದ್ದು ತಿಂದು ಆನೆ ಸಾವನ್ನಪ್ಪಿತ್ತು. ಆಹಾರದಲ್ಲಿ ಸಿಡಿಮದ್ದು ಇಟ್ಟು ಆನೆಗೆ ತಿನ್ನಿಸಿದ ಹೀನ ಮನಸ್ಥಿತಿಯ ಅನಾಕರಿಂದ ಆ ಆನೆ ಸಾವಿಗೀಡಾಗಿತ್ತು. ಇಂತಹ ಹಲವಾರು ಸನ್ನಿವೇಶಗಳ ಉದಾಹರಣೆಗಳಿವೆ. ಅಲ್ಲದೆ, ಕಳೆದ ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಆನೆಯೊಂದು ಪ್ರವಾಹದ ನೀರಿಗೆ ಸಿಕ್ಕಿ ಸಾವನ್ನಪ್ಪಿದ್ದು, ನದಿ ನೀರಿನಲ್ಲಿ ತೇಲಿ ಹೋಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಲ್ಲದೆ, ಆನೆಗಳ ಆಹಾರಕ್ಕೆ ಅಗತ್ಯವಿರುವಷ್ಟು ಅರಣ್ಯ ಪ್ರದೇಶವೂ ಇಲ್ಲದೆ, ಆನೆಗಳು ನಾಡನ್ನು ಪ್ರವೇಶಿಸುತ್ತಲೇ ಇವೆ. ಅವುಗಳನ್ನು ನಿಯಂತ್ರಿಸಲು ವಿದ್ಯುತ್‌ ತಂತಿ ಬೇಲಿಗಳನ್ನು ಹಾಕಿ, ಅವುಗಳ ಶಾಕ್‌ ನಿಂದಲೂ ಆನೆಗಳು ಸಾವನ್ನಪ್ಪಿವೆ.

ಆನೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇಂದಿನ ಆನೆಗಳ ದಿನದ ನೆನಪಿನಲ್ಲಿ, ಆನೆಗಳ ಸಂರಕ್ಷಣೆಗೆ ಸಹಾಯ ಮಾಡಲು ಪ್ರತಿಜ್ಞೆ ಮಾಡೋಣ ಎಂದು ಕನ್ನಡ ಸಿನಿಮಾರಂಗದ ನಟ ದರ್ಶನ್ ಕರೆಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ದರ್ಶನ್, “ಇಂದು ಆಗಸ್ಟ್ 12 ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಇಂದುಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ” ಎಂದು ಕರೆಕೊಟ್ಟಿದ್ದಾರೆ.


ಇದನ್ನೂ ಓದಿಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights