ಶುದ್ಧ ಕುಡಿಯುವ ನೀರಿಗೆ ಕತ್ತರಿ ಹಾಕಿದ್ದ ವ್ಯಕ್ತಿ : ನೀರು ಕೋಡಿ ನೀರು ಕೋಡಿ ಎಂದ ಮಹಿಳೆಯರು..!

ಗ್ರಾಮೀಣ ಜನರಿಗೆ ಶುದ್ಧ ನೀರು ಪೂರೈಕೆಗಾಗಿ ಸರಕಾರ ಲಕ್ಷಾಂತರ ರೂ ವೆಚ್ಚ ಮಾಡಿ ನೀರಿನ ಘಟಕ ನಿರ್ಮಿಸಿದೆ . ..! ಆದ್ರೆ, ಶುದ್ಧ ನೀರು ಪೂರೈಸುವ ಘಟಕಕ್ಕೆ ಓರ್ವ ವ್ಯಕ್ತಿ ದರ್ಪ ತೊರಿದ್ದಾನೆ.. ..!, ಗ್ರಾಮದ ಮುಖಂಡನೊಬ್ಬ ನೀರು ಪೂರೈಸುವ ಪೈಪ್ ಗೆ ಕತ್ತರಿ ಹಾಕಿದ್ದಾನೆ. ನೀರಿಗೆ ಕತ್ತರಿ ಹಾಕಿದ್ದ ಹಿನ್ನಲೇ ಜನರು ಗಲೀಜು ನೀರು ಸೇವಿಸುವಂತಾಗಿದೆ.

ಹೌದು ರಾಜ್ಯ ಸರಕಾರ ,ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಕೋಟ್ಯಾಂತರ ರೂ ವೆಚ್ಚ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ, ಜನರಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡುತ್ತಿದೆ ..! ಆದ್ರೆ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸರಕಾರ ಲಕ್ಷಾಂತರ ರೂ ವೆಚ್ಚಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದೆ,, ಆದ್ರೆ, ಗ್ರಾಮದ ಮುಖಂಡ ಬಸವರಾಜ ತನ್ನ ಜಮೀನಿಗೆ ನೀರಿನ ಘಟಕದ ವೆಸ್ಟ್ ನೀರು ,ಹರಿದು ಬರುತ್ತವೆಂದು ತಿಳಿದು ಆಕ್ರೋಶಗೊಂಡು ಶುದ್ಧ ಕುಡಿಯುವ ನೀರಿನ ಘಟಕದ ನೀರು ಪೂರೈಸುವ ಪೈಪ್,ನಲ್ಲಿ ಹಾಗೂ ಇನ್ನಿತರ ವಸ್ತುಗಳನ್ನು ಧ್ವಂಶ ಮಾಡಿ ತನ್ನ ದರ್ಪ ತೊರಿದ್ದಾನೆ …! , ಇದರಿಂದ ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಸ್ಥಗೀತಗೊಂಡಿದ್ದು,, ಜನರು ಹನಿ ಹನಿ ನೀರಿಗಾಗಿ ಹಾಹಕಾರ ಪಡುವಂತಾಗಿದೆ.

ಸರಕಾರ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 2018-19 ನೇ ಸಾಲಿನಲ್ಲಿ 12 ಲಕ್ಷ ರೂ ವೆಚ್ಚದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ 12 ಲಕ್ಷ ರೂ ವೆಚ್ಚದಲ್ಲಿ, ವಡಗೇರಾ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದೆ. ಗ್ರಾಮದಲ್ಲಿ ಕುಡಿಯಲು ಯೋಗ್ಯದ ನೀರು ಇರದ ಕಾರಣ ,,ಜನರ ಆರೋಗ್ಯದ ಹೀತ ದೃಷ್ಠಿಯಿಂದ ಸರಕಾರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದೆ., ಆದ್ರೆ, ನೀರಿನ ಘಟಕದ ವೆಸ್ಟ್ ನೀರು ಹೋಗಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ.ಹೀಗಾಗಿ ಜಮೀನಿಗೆ ನೀರು ಹರಿಯುತ್ತಿದ್ದ ಹಿನ್ನಲೆ ಪೈಪ್ ಕಟ್ ಮಾಡಲಾಗಿದೆ.ಘಟಕ ಅಳವಡಿಸಿ 2 ತಿಂಗಳಾಗಿದ್ದು,, ಎರಡು ತಿಂಗಳೊಳಗೆ ಗ್ರಾಮದ ಮುಖಂಡ ತನ್ನ ಪುಂಡಾಟಿಕೆ ತೊರಿ ಘಟಕ ಹಾಳು ಮಾಡಿದ್ದಾನೆ. ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಜಮೀನಿಗೆ ನುಗ್ಗುತ್ತದೆ ಎಂದ್ರೆ, ಸರಕಾರದ ಗಮನಕ್ಕೆ ತಂದು ಪರ್ಯಾಯ ಪರಿಹಾರ ಕಂಡುಕೊಳ್ಳಬೇಕಿತ್ತು… ಆದ್ರೆ, ಏಕಾ ಏಕಿ ಈಡಿ ಗ್ರಾಮಕ್ಕೆ ಶುದ್ಧ ನೀರು ಪೂರೈಸುವ ಘಟಕದ ಪೈಪ್ ಹಾಗೂ ಮುಖ್ಯ ಟ್ಯಾಂಕ್ ಗೆ ನೀರು ಸರಬರಾಜು ಮಾಡುವ ಪೈಪ್ ಕಿತ್ತಿ ಹಾಕಿ ದರ್ಪ ತೊರಿದ್ದಾರೆ.ಇದರಿಂದ ಗ್ರಾಮದ ಜನರು ಗಲೀಜು ನೀರು ಸೇವಿಸುವಂತಾಗಿದೆ.

ಈ ಬಗ್ಗೆ ಮಾತನಾಡಿದ ಹಾಲಗೇರಾ ಪಿಡಿಓ ಮಲ್ಲಿಕಾರ್ಜುನ ಸಜ್ಜನ್ ,ಆದಷ್ಟು ಬೇಗ ವೆಸ್ಟ್ ನೀರು ಹೋಗಲು ಪೈಪ್ ಅಳವಡಿಸಿ ಜನರಿಗೆ ನೀರಿನ ತೊಂದರೆಯಾಗದಂತೆ ಅದೆ ರೀತಿ ರೈತರ ಜಮೀನಿಗೆ ಹೋಗದಂತೆ ಅಗತ್ಯ ಕ್ರಮಕೈಗೊಂಡು ಶುದ್ಧ ನೀರು ಪೂರೈಸಲಾಗುತ್ತದೆ ಎನ್ನುತ್ತಾರೆ‌.

ಗ್ರಾಮದ 1 ಕಿಮೀ ದೂರದ ಜಮೀನು ಪ್ರದೇಶಕ್ಕೆ ಹೋಗಿ ಮಕ್ಕಳು,ವೃದ್ಧರು,ಎಲ್ಲರೂ ನೀರು ತರುವಂತಾಗಿದೆ.ಆದ್ರೆ, ಈ ನೀರು ಕುಡಿಯಲು ಯೋಗ್ಯವಿಲ್ಲ ಇದರಿಂದ ಅನಾರೋಗ್ಯಕ್ಕೆ ಜನರು ತುತ್ತಾಗುವಂತಾಗಿದೆ. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಕಿತ್ತು ಹೋಗಿರುವ ಪೈಪ್ ದುರಸ್ಥಿ ಮಾಡಿ ಜನರಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights