ಸಿದ್ಧರಾಮಯ್ಯ, ಎಚ್ ಡಿ ಕೆ ಅವಧಿಯಲ್ಲಿ ವಸತಿ ಯೋಜನೆಯಲ್ಲಿ ಅವ್ಯವಹಾರ ಆರೋಪ- ತನಿಖೆ ಆರಂಭವಾಗಿದೆ- ಸಚಿವ ವಿ. ಸೋಮಣ್ಣ
ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿಗ ಅಧಿಕಾರಾವಧಿಯಲ್ಲಿ ಆಶ್ರಯ ಯೋಜನೆಗಳಲ್ಲಿ ಅವ್ಯವಹಾರವಾಗಿದ್ದು, ಈ ಕುರಿತು ತನಿಖೆ ಆರಂಭವಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಎಸ್. ಸಿದ್ಧರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ 14 ಲಕ್ಷ ಆಶ್ರಯ ಮನೆ ನಿರ್ಮಿಸಲಾಗಿದೆ ಎಂದು ಲೆಕ್ಕಪತ್ರದಲ್ಲಿ ತೋರಿಸಲಾಗಿದೆ. ಆದರೆ, ಆದರೆ, ಇವೆಲ್ಲ ಕೇವಲ ಕಾಗದದಲ್ಲಿವೆ ಎಂದು ಹೇಳಿದರು.
ವಸತಿ ಯೋಜನೆಯಲ್ಲಿ ಅವ್ಯವಹಾರ ಆಗಿದೆ ಎಂದು ಸಾಕಷ್ಟು ದೂರುಗಳು ಬಂದಿವ. ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ. ಎಲ್ಲವೂ ತಮಗೆ ಬೇಕಾದವರಿಗೆ, ಬೆಂಬಲಿಗರಿಗೆ, ಹಣ ಕೊಟ್ಟವರಿಗೆ ನೀಡಲಾಗಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಎಲ್ಲವನ್ನು ತನಿಖೆಗೆ ಆದೇಶಿಸಿದ್ದೇನೆ. ನಾಲ್ಕು ದಿನಗಳ ಹಿಂದೆ ತನಿಖೆ ಆರಂಭವಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ನೆರೆ ಸಂತ್ರಸ್ಥರ ಪರಿಹಾರ ವಿಚಾರ ಕುರಿತು ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ನೀಡಿದಷ್ಟು ಪರಿಹಾರವನ್ನು ಯಾರೂ ನೀಡಿಲ್ಲ. ಎಲ್ಲಾ ರಾಜ್ಯಗಳಲ್ಲೂ ಪ್ರವಾಹ ಬಂದಾಗ ಬಿದ್ದ ಮನೆಗಳಿಗೆ ಕೇವಲ ರೂ. 1 ಲಕ್ಷ ಪಾಯಿ ಪರಿಹಾರ ನೀಡಲಾಗಿದೆ. ಆದರೆ, ಸಿಎಂ ಬಿ. ಎಸ್. ಯಡಿಯೂರಪ್ಪ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈಗಾಗಲೇ ರೂ.1 ಲಕ್ಷದ ವರೆಗೆ ಪರಿಹಾರ ಸಂತ್ರಸ್ತ ಫಲಾನುಭವಿಗಳಿಗೆ ತಲುಪಿದೆ. ಹಣಕಾಸಿನ ಲೆಕ್ಕಾಚಾರ ನೋಡಿ ಹಂತ ಹಂತವಾಗಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದರು.

