ಸಿಲಿಕಾನ್ ಸಿಟಿಯಲ್ಲಿ ಉಚಿತ ಹಾಲಿಗಾಗಿ ಕ್ಯೂ : ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿ ಅಧಿಕವಾಗುತ್ತಿದೆ. ಇದರ ನಡುವೆ ಬೆಂಗಳೂರು ಮಂದಿ ಉಚಿತ ಹಾಲಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದು ಪೊಲೀಸರು ಇವರನ್ನು ಚದುರಿಸಲು ಹರಸಾಹಸಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗಿ ಇರುವುದು ಬೆಂಗಳೂರಿನಲ್ಲಿ ಹೀಗಾಗಿ ಇಲ್ಲಿ ಅಧಿಕ ಜನರಿಗೆ ಸೋಂಕು ಹರಡುವ ಸಾಧ್ಯತೆಗಳು ಅಧಿಕವಾಗಿವೆ.ಆದರೆ ಈ ಒಂದು ಪರಿವಿಲ್ಲದೇ ಜನ ಬೆಳ್ಳಂಬೆಳಿಗೆ ಉಚಿತ ಹಾಲು ಖರೀದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಘಟನೆ ನಡೆದಿದ್ದು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ. ರಾಜಕಾರಣಿಗಳೇನೋ ಪ್ರಚಾರಕ್ಕಾಗಿ ಉಚಿತ ಹಾಲು ಕೊಡುತ್ತಾರೆ. ಆದರೆ ಜೀವದ ಹಂಗು ತೊರೆದು ಜನ ಅರ್ಧ ಲೀಟರ್ ಹಾಲು ಖರೀದಿಗೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ ಅಂದರೆ ಪೊಲೀಸರು ಇವರನ್ನು ಚದುರಿಸುವುದು ಹೇಗೆ..?

ಈಗಾಗಲೇ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಕೊರೊನಾ ಸೋಂಕು ಹರಡುತ್ತಿದೆ. ಹೀಗಿರುವಾಗ ಲಾಕ್ವ ಡೌನ್ ಕೂಡ ಮುಂದುವರೆಯುವ ಸಾಧ್ಯತೆ ಇದ್ದು ಜನ ಎಷ್ಟು ಜಾಗೃತರಾಗಿದ್ದರೂ ಕಡಿಮೆಯೇ. ಈಗಂತೂ ಕೊರೊನಾ ಮೂಲವಿಲ್ಲದೇ ಲಕ್ಷಣಗಳಿಲ್ಲದೇ ಪರೀಕ್ಷೆಗೆ ಒಳಪಟ್ಟ ಬಳಿಕ ಕಾಣಿಸಿಕೊಳ್ಳುತ್ತಿದೆ. 5000 ಜನರಲ್ಲಿ ಸೋಂಕು ಕಾಣಿಸಿಕೊಂಡರೆ ದೇಶದಲ್ಲಿ ಗುಣಮುಖರಾದವರ ಸಂಖ್ಯೆ ಕೇವಲ 100 ರಿಂದ 150 ಜನ ಮಾತ್ರ ಗುಣಮುಖರಾಗುತ್ತಿದ್ದಾರೆ. ಸಾವಿನ ಸಂಖ್ಯೆ ಕಡಿಮೆ ಇದ್ದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಇದ್ದಲ್ಲಿ ಪ್ರಾಣಕ್ಕೆ ಆಪತ್ತು ಕಂಡಿತ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆ ಯಾವ ಮಟ್ಟಕ್ಕಿದೆ ಅನ್ನೋದರ ಬಗ್ಗೆ ತಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಇನ್ನೂ ವೇಗವಾಗಿ ಹರಡುತ್ತಿರುವ ಸೋಂಕಿಗೆ ಮದ್ದಿಲ್ಲ. ಒಂದು ವೇಳೆ  ಸೋಂಕು ಗುಂಪು ಹರಡಿದಾಗ ತಗುಲಿದರೆ ಹಂತ 3 ಕ್ಕೆ ತಲುಪುತ್ತದೆ. ಹೀಗೆ ಒಂದೇ ಬಾರಿ ಸೋಂಕು ತಲುಪಿದ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ಇರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದ್ದಕ್ಕಿಂದ್ದಂತೆ ಮಾಡಿಕೊಳ್ಳಲು ಹೇಗೆ ಸಾಧ್ಯ..? ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ.

ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಉಚಿತ ಹಾಲಿಗಾಗಿ ಇಂದು ಮುಂಜಾನೆ 5 ಗಂಟೆಯಿಂದ ಸಾವಿರಾರು ಜನರು ಕಾತು ನಿಂತಿದ್ದಾರೆ. ಆದರೆ ಜನರು ಸಾಮಾಜಿಕ ಅಂತರವನ್ನು ಮರೆತು ಸಾಲುಗಟ್ಟಿ ನಿಂತಿದ್ದು, ಸುಮಾರು 2000 ಜನ ಹಾಲಿಗಾಗಿ ಕ್ಯೂ ನಿಂತಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.   ಮಾತು ಕೇಳದವರಿಗೆ ಲಾಠಿ ರುಚಿ ಕೂಡ ತೋರಿಸಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights