Corona effect : ರಾಜಧಾನಿ ಬೆಂಗಳೂರಿನ 2 ಆಸ್ಪತ್ರೆಗಳಿಗೆ ಬೀಗ, details ಇಲ್ಲಿದೆ..

ಚಿಕಿತ್ಸೆ ಪಡೆದವರಲ್ಲಿ ಕರೋನಾ ಸೋಂಕಿತರು ಇದ್ದದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿದೆ. ಕೊರೋನಾ ಸೋಂಕಿತು ಹಾಗೂ ಅವರ ಸಂಪರ್ಕಿತರು ಇಲ್ಲಿ ಚಿಕಿತ್ಸೆ ಪಡೆದಿರುವುದು ಖಾತರಿಯಾದ ಕಾರಣ ಎರಡು ಆಸ್ಪತ್ರೆಗಳನ್ನು ಮುಚ್ಚಲಾಗಿದೆ.

ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ತಗುಲಿದ ಪರಿಣಾಮ ಏಪ್ರಿಲ್ 1ರಿಂದಲೇ ಆಸ್ಪತ್ರೆ ಬಂದ್ ಆಗಿದ್ದರೇ ಇದೀಗ ಮತ್ತೊಂದು ಆಸ್ಪತ್ರೆ ಈ ಪಟ್ಟಿಗೆ ಸೇರಿದೆ. ಬಸವೇಶ್ವರ ನಗರದ ಕುರುಬರ ಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಯನ್ನು ಇದೀಗ 14 ದಿನಗಳ ಮಟ್ಟಿಗೆ ಮುಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯ ಪತಿ ಸೋಂಕಿತರಿದ್ದರು ಮತ್ತು ಹೆರಿಗೆ ಬಳಿಕ ಮಹಿಳೆಗೂ ಸೋಂಕು ದೃಢಪಟ್ಟಿತ್ತು. ನವಜಾತ ಶಿಶುವಿನ ಪರೀಕ್ಷೆ ನಕಾರಾತ್ಮಕವಾಗಿದೆ.

ಈ ಬೆಳವಣಿಗೆಯಿಂದಾಗಿ ಮುಂದಿನ 14 ದಿನಗಳವರೆಗೆ ಆಸ್ಪತ್ರೆಯನ್ನು ಮುಚ್ಚಲು ಬಿಬಿಎಂಪಿ ಆದೇಶ ನೀಡಿದ್ದು ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ಬೇರ್ಪಡಿಕೆಗೆ ಒಳಪಡಿಸಲಾಗಿದೆ.  ಇದೆಲ್ಲದರ ನಡುವೆ ಮತ್ತೊಂದು ದೊಡ್ಡಾಸ್ಪತ್ರೆಯಾಗಿರುವ ಅಗಡಿ ನರ್ಸಿಂಗ್ ಹೋಮಿನ 28 ಮಂದಿ ಸಿಬ್ಬಂದಿಯನ್ನು ಸಹ ಬೇರ್ಪಡಿಸಿ ಇರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights