ಭರ್ಜರಿಯಾಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟ ‘ಪೊಗರು’ : ಟಿಕೇಟ್ ಸೋಲ್ಡ್ ಔಟ್!

ಇಂದು ಪೊಗರು ಸಿನಿಮಾ ಭರ್ಜರಿಯಾಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿದ್ದು, ರಾಜ್ಯದೆಲ್ಲೆಡೆ ಚಿತ್ರಮಂದಿರಗಳು ಬಹುತೇಕ ಫುಲ್ ಆಗಿವೆ. ಈಗಾಗಲೇ ಮೊದಲ ಪ್ರದರ್ಶನದ ಟಿಕೇಟ್ ಸೋಲ್ಡ್ ಔಟ್ ಆಗಿದ್ದು, ಪೇಕ್ಷಕರು ಮುಂದಿನ ಶೋಗಳಿಗೆ ಮುಗಿಬಿದ್ದಿದ್ದಾರೆ.

ಪೊಗರು ಚಿತ್ರ ಪ್ರದರ್ಶನ ಆರಂಭಕ್ಕೂ ಮುನ್ನ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿತ್ತು. ಗಾಂಧಿನಗರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ಧಾರೆ. ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿರುವ ಹುಬ್ಬಳ್ಳಿಯ ನಟ ಕೃಷ್ಟ ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಪೇಕ್ಷಕರ ಜೊತೆ ಸಂಭ್ರಮಿಸಿದ್ದಾರೆ.

ಬೆಂಗಳೂರು. ಧಾರವಾಡ, ಹುಬ್ಬಳ್ಳಿ ಹೀಗೆ ಬಹುತೇಕ ಕಡೆ ಮೊದಲ ಪ್ರದರ್ಶನ ಟಿಕೇಟ್ ಸೋಲ್ದ ಔಟ್ ಆಗಿದ್ದು, ಪೇಕ್ಷಕರು 2 ಆಟದ ಟಿಕೆಟ್ ಗಾಗಿ ಮುಗಿಬಿದ್ದು ಕ್ಯೂ ನಿಂತಿದ್ದಾರೆ. ಮೊದಲ ಪ್ರದರ್ಶನ ಮುಂಜಾನೆ 9 ಗಂಟೆಗೆ ಆರಂಭವಾಗಿದೆ. ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರ ವೀಕ್ಷಣೆಗಾಗಿ ಪೇಕ್ಷಕರು ಹೇಗೆ ಕಾತರಾಗಿದ್ದರೆ ಟಿಕೆಟ್ ಗೆ ಕ್ಯೂ ನಿಂತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights