ನನ್ನತ್ರ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ; ಬಟ್ಟೆ ಅಂಗಡಿ ತೆರೆಯಿರಿ ಪ್ಲೀಸ್‌: ಸಿಎಂಗೆ ಪತ್ರ ಬರೆದ ಮೈಸೂರಿಗ

ನನ್ನತ್ರ ಇದ್ದ 2 ಜೊತೆ ಒಳ ಉಡುವುಗಳೂ ಹರಿದು ಹೋಗಿವೆ. ದಯವಿಟ್ಟು ವಾರದಲ್ಲಿ ಒಂದು ದಿನವಾದರೂ ಬಟ್ಟೆ ಅಂಗಡಿ ತೆರೆಯಲು ಅವಕಾಶ ಕೊಡಿ, ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೈಸೂರಿನ ನಿವಾಸಿಯೊಬ್ಬರು ಪತ್ರ ಬರೆದಿದ್ದಾರೆ.

ಮೈಸೂರು ನಗರದ ಚಾಮರಾಜಪುರಂನ ನಿವಾಸಿ ಕೊ.ಸು. ನರಸಿಂಹ ಮೂರ್ತಿ ಅವರು ತಮಗಿರುವ ಬಟ್ಟೆ ಸಮಸ್ಯೆಯ ಬಗ್ಗೆ ಪತ್ರದಲ್ಲಿ ವಿವರಿಸಿದ್ದು, ‘ಮುಖ್ಯಮಂತ್ರಿಗಳೇ ನನ್ನ ಮನವಿ ವಿಚಿತ್ರವೆನಿಸಿದರೂ ಸತ್ಯ. ನನ್ನ ಬಳಿ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ ದಯವಿಟ್ಟು ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ‌ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.

ಲಾಕ್​​​ಡೌನ್ ಮುಂದುವರೆಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿವೆ.  ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಬಟ್ಟೆ ಅಂಗಡಿ ತೆರೆಯಿರಿ.!  ಜನರ ಅಗತ್ಯಗಳ ಬಗ್ಗೆ ಸರಕಾರ / ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು. ಕಳೆದೆರಡು ತಿಂಗಳುಗಳಿಂದ ಎಲ್ಲ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಅಂತ ನೋಡಿದ್ದೀರಾ? ಕೇವಲ 2 ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಚಡ್ಡಿ ಹಾಗೂ ಬನಿಯ್​​ನಗಳು ಹರಿಯುತ್ತಿವೆ ಎಂದು ವಿವರಿಸಿದ್ದಾರೆ.

ನನ್ನತ್ರ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ
ಪತ್ರ ಬರೆದ ವ್ಯಕ್ತಿ

ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೆ ಆಗಿರಬಹುದು. ಯಾರ ಹತ್ರ ಹೇಳೋಣ ನಮ್ ಪ್ರಾಬ್ಲಂ? ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ..! ಹೊಟ್ಟೆ ಬಗ್ಗೆ ಗಮನ ಹರಿಸುವ ಸರ್ಕಾರ ಬಟ್ಟೆಬಗೆಯ ಬಗ್ಗೆಯೂ ಚಿಂತಿಸಬೇಕು. ಎಲ್ಲರೂ ಮಾಡುವುದು ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಅಲ್ಲವೇ? ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: “ಇದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್” – ಡಿಕೆ ಶಿವಕುಮಾರ್ ಟೀಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights