ಫ್ಯಾಕ್ಟ್‌ಚೆಕ್ : ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದಕ್ಕೆ ತೇಜಸ್ವಿ ಯಾದವ್ ಕುಣಿದದ್ದು ನಿಜವೇ?

JDU ನಾಯಕ ನಿತೀಶ್ ಕುಮಾರ್ ಅವರು NDA ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿ ಮತ್ತೆ ಮಹಾಘಟಬಂಧನ್‌ಗೆ ಸೇರಿ ಸರ್ಕಾರ ರಚಿಸಿದ್ದಾರೆ.  ಈ ಘಟನೆಯಿಂದ ಪುಳಕಿತರಾದ ಲಾಲು ಪ್ರಸಾದ್ ಯಾದವ್ ಅವರ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ಸಂತೋಷದಿಂದ ನೃತ್ಯ ಮಾಡುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 12 ಮೇ 2018 ರಂದು ‘ಝೀ ಬಿಹಾರ್ ಜಾರ್ಖಂಡ್’ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳಿರುವ ವೀಡಿಯೊ ಕಂಡುಬಂದಿದೆ. ‘ಝೀ ಬಿಹಾರ್ ಜಾರ್ಖಂಡ್’ ಇದನ್ನು ತೇಜಸ್ವಿ ಯಾದವ್ ತಮ್ಮ ಸಹೋದರ ತೇಜ್ ಪ್ರತಾಪ್ ಯಾದವ್‌ರವರ ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವ ದೃಶ್ಯಗಳು ಎಂದು ವರದಿ ಮಾಡಿದೆ. ಮೇ 2018 ರಲ್ಲಿ ಕೆಲವು ಇತರ ಸುದ್ದಿ ವಾಹಿನಿಗಳು ಇದೇ ರೀತಿಯ ವಿವರಣೆಯೊಂದಿಗೆ ಈ ವೀಡಿಯೊವನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ವಿಡಿಯೊದ ಮೂಲವನ್ನು ಮತ್ತಷ್ಟು ಸರ್ಚ್ ಮಾಡಿದಾಗ, ತೇಜಸ್ವಿ ಯಾದವ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ  ಅದೇ ವೀಡಿಯೊ ಲಭ್ಯವಾಗಿದೆ. ತೇಜಸ್ವಿ ಯಾದವ್ ಅವರು 12 ಮೇ 2018 ರಂದು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ-“ದೇಸಿ ನೆಲದ ಹುಡುಗರು.. ಸಹೋದರನ ಮದುವೆ.. ನಾವು ಹೇಗಿದ್ದೀವೋ ಹಾಗೆಯೇ ಇದ್ದೇವೆ.. ಸರಳ ಮತ್ತು ನೇರ ” ಎಂದು ಬರೆದುಕೊಂಡು ಪೋಸ್ಟ್‌ಅನ್ನು ಟ್ವೀಟ್ ಮಾಡಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು RJD ಶಾಸಕಿ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು 12 ಮೇ 2018 ರಂದು ಮದುವೆಯಾಗಿದ್ದರು.

ಈ ವೈರಲ್ ಡ್ಯಾನ್ಸ್ ವೀಡಿಯೊದ ವಿವರಗಳನ್ನು ವರದಿ ಮಾಡುತ್ತಾ, ಹಲವು ಸುದ್ದಿ ವೆಬ್‌ಸೈಟ್‌ಗಳು 2018 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಮೇ 2018 ರಲ್ಲಿ ನಡೆದ ತೇಜ್ ಪ್ರತಾಪ್ ಯಾದವ್ ಅವರ ಮದುವೆ ಸಮಾರಂಭದಲ್ಲಿ ತೇಜಸ್ವಿ ಯಾದವ್ ಡಿಜೆ ಹಾಡಿಗೆ ನೃತ್ಯ ಮಾಡುತ್ತಿರುವ ಹಳೆಯ ದೃಶ್ಯಗಳನ್ನು ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊ ಹಳೆಯದಾಗಿದೆ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಕೇಕ್‌ ಪ್ಯಾಕೆಟ್‌ನಲ್ಲಿ ಮಾತ್ರೆಗಳಿದ್ದವೆ? ತಿಂದರೆ ಮಕ್ಕಳಿಗೆ ಪಾರ್ಶ್ವವಾಯು ತಗುಲುವುದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights