ರಾಜ್ಯದಲ್ಲಿಂದು 97 ಹೊಸ ಕೊರೊನಾ ಕೇಸ್ : ಸೋಂಕಿತರ ಸಂಖ್ಯೆ 2056ಕ್ಕೇರಿಕೆ!
ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದಕ್ಕೆ ಸಾಕ್ಷಿ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ. ಇಂದು ಹೊಸದಾಗಿ 97 ಪಾಸಿಟಿವ್ ಕೇಸ್ ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೇರಿಕೆಯಾಗಿದೆ.
ಹೌದು.. ಆರೋಗ್ಯ ಇಲಾಖೆ ನೀಡಿದ ಮದ್ಯಾಹ್ನದ ಹೆಲ್ತ್ ಬುಲಿಟಿನ್ ನಲ್ಲಿ ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದವರೆಗೆ 97 ಕೊರೊನಾ ಕೇಸ್ ದಾಖಲಾಗಿವೆ. ಆದರೆ ಇಂದು ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಈ ವರೆಗೆ ದಾಖಲಾದ 2056ಕೊರೊನಾ ಕೇಸ್ ಗಳ ಪೈಕಿ ಒಟ್ಟು 634 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 42 ಜನ ಸಾವನ್ನಪ್ಪಿದ್ದಾರೆ. ಇನ್ನುಳಿದ 1378 ಜನರಿಗೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಪತ್ತೆಯಾದ 97 ಪ್ರಕರಣಗಳಲ್ಲಿ ಉತ್ತರ ಕನ್ನಡ2, ದಕ್ಷಿಣ ಕನ್ನಡ1, ಉಡುಪಿ 18, ಚಿಕ್ಕಬಳ್ಳಾಪುರ 26, ದಾವಣಗೆರೆ 4, ಕಲಬುರಗಿ 6, ಮಂಡ್ಯ 15, ಮಡಿಕೇರಿ, ವಿಜಯಪುರ, ಧಾರವಾಡ ತಲಾ 1, ಹಾಸನ 14 , ತುಮಕೂರು 2, ಯಾದಗಿರಿ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊಂಚ ನಿಟ್ಟುಸಿರು ಬಿಡುವ ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ.
ಇನ್ನೂ ದೇಶದಲ್ಲಿ ಒಂದೇ ದಿನದಲ್ಲಿ 6767 ಕೇಸ್ ದಾಖಲಾಗಿದ್ದು, ಮೂರುನಾಲ್ಕು ದಿನಗಳಿಂದ ಪ್ರತಿನಿತ್ಯ 6 ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದಾರೆ. ಈವರೆಗೆ ಸೋಂಕಿತರ ಸಂಖ್ಯೆ 1,38,1818ಕ್ಕೆ ಏರಿಕೆಯಾಗಿದೆ. 3867 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.

