ರಾಷ್ಟ್ರ ರಾಜಧಾನಿಯಲ್ಲಿ 80% ಸೋಂಕಿತರು ಗುಣಮುಖ; ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ!

ದೆಹಲಿಯಲ್ಲಿ ಕೊರೊನಾ ಸೋಂಕಿನ ಹರಡುವಿಕೆಯ ನಿಯಂತ್ರಣ, ಸೋಂಕಿತರ ಕ್ವಾರಂಟೈನ್‌, ಚಿಕಿತ್ಸೆಗಳಲ್ಲಿ ಹೆಚ್ಚಿನ ಗಮನ ಹರಿಸುತ್ತಿರುವ ದೆಹಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿ ಹೆಚ್ಚಿ ಇಟ್ಟಿದೆ. ದೆಹಲಿಯಲ್ಲಿ ಇದೂವರೆಗೂ ಪತ್ತೆಯಾಗಿರುವ ಸೋಂಕಿತರಲ್ಲಿ ಶೇ.80 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ನಿನ್ನೆ (ಭಾನುವಾರ)ದ ವೇಳೆಗೆ ಕೊರೊನಾದಿಂದ ಗುಣಮುಖರಾದವರ ಪ್ರಮಾಣ  ಶೇ.79.97ಕ್ಕೆ ತಲುಪಿದೆ. ದೆಹಲಿಯಲ್ಲಿ ನಿನ್ನೆ 1,573 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,12,494ಕ್ಕೆ ಏರಿಕೆಯಾಗಿದೆ. ಅಲ್ಲದೆ, ದೇಹಲಿಯಲ್ಲಿ ಒಂದೇ ದಿನ 37 ಸೋಂಕಿತರು ಸಾವನ್ನಪ್ಪಿದ್ದು,  ಸಾವಿನ ಸಂಖ್ಯೆ 3,371 ಕ್ಕೆ ಏರಿಕೆಯಾಗಿದೆ.

ಕೋವಿಡ್ ಪರೀಕ್ಷೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ದೆಹಲಿಯ ದೈನಂದಿನ ಕೋವಿಡ್ ಪ್ರಕರಣಗಳಲ್ಲಿನ ಇತ್ತೀಚಿನ ದಿನಗಳಲ್ಲಿ ಕುಸಿತ ಕಂಡಿದೆ. ದೆಹಲಿಯಲ್ಲಿ ಒಟ್ಟಾರೆ 1,12,494 ಪ್ರಕರಣಗಳ ಪೈಕಿ ಈ ವರೆಗೂ 79.97 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ 89,968 ಸೋಂಕಿತರು ಗುಣಮುಖರಾಗಿದ್ದು, 19,155 ಸೋಂಕಿತರು ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights