ಕೋವಿಡ್ -19 ಲಸಿಕೆ ಕಂಡುಹಿಡಿದು ಮಾನವ ಪ್ರಯೋಗಗಳನ್ನು ಮುಗಿಸಿದ ಮೊದಲ ರಾಷ್ಟ್ರ ರಷ್ಯಾ…

ಜಗತ್ತನ್ನೇ ಬೆಂಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿದ ರಷ್ಯಾ ವಿಶ್ವದ ಮೊದಲ ರಾಷ್ಟ್ರವಾಗಿದೆ.

ಹೌದು.. ಮಾನವರ ಮೇಲೆ ಕೋವಿಡ್ -19 ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಮಾಸ್ಕೋ ಔಷಧದ ಫಲಿತಾಂಶವನ್ನು ಸಾಬೀತುಪಡಿಸಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

“ಲಸಿಕೆಗಾಗಿ ಮಾನವ ಪ್ರಯೋಗಗಳು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಂಡಿವೆ. ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ” ಎಂದು ಸೆಕೆನೋವ್ ವಿಶ್ವವಿದ್ಯಾಲಯದ ಔಷಧಿಗಳ ಕೇಂದ್ರದ ಕ್ಲಿನಿಕಲ್ ರಿಸರ್ಚ್ ಮುಖ್ಯಸ್ಥರಾದ ಮುಖ್ಯ ಸಂಶೋಧಕಿ ಎಲೆನಾ ಸ್ಮೊಲ್ಯಾರ್ಚುಕ್ ಅವರು ರಷ್ಯಾದ ಸುದ್ದಿ ಸಂಸ್ಥೆ ಟಾಸ್ಗೆ ಭಾನುವಾರ ಹೇಳಿದ್ದಾರೆ.

“ಸಂಶೋಧನೆ ಪೂರ್ಣಗೊಂಡಿದೆ ಮತ್ತು ಲಸಿಕೆ ಸುರಕ್ಷಿತವಾಗಿದೆ ಎಂದು ಸಾಬೀತು ಮಾಡಲಾಗಿದೆ. ಜುಲೈ 15 ಮತ್ತು ಜುಲೈ 20 ರಂದು ಸ್ವಯಂಸೇವಕರನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಸ್ಮೋಲಿಯಾರ್ಚುಕ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆದಾಗ್ಯೂ, ಈ ಲಸಿಕೆ ವಾಣಿಜ್ಯ ಉತ್ಪಾದನಾ ಹಂತಕ್ಕೆ ಯಾವಾಗ ಪ್ರವೇಶಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ.

ಜೂನ್ 18 ರಂದು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸಂಭಾವ್ಯ ಕೊರೊನಾವೈರಸ್ ಲಸಿಕೆಯ ಎರಡು ರೀತಿಯ ಕ್ಲಿನಿಕಲ್ ಪ್ರಯೋಗಗಳನ್ನು ರಷ್ಯಾ ಅನುಮತಿಸಿತ್ತು.

ಸೆಚೆನೋವ್ ವಿಶ್ವವಿದ್ಯಾಲಯದಲ್ಲಿ ಲಸಿಕೆ ಕುರಿತು ಮೊದಲ ಹಂತದ ಸಂಶೋಧನೆಯು 18 ಸ್ವಯಂಸೇವಕರ ಗುಂಪನ್ನು ಒಳಗೊಂಡಿತ್ತು. ಎರಡನೇ ಗುಂಪಿನಲ್ಲಿ 20 ಸ್ವಯಂಸೇವಕರು ಸೇರಿದ್ದಾರೆ.

ವ್ಯಾಕ್ಸಿನೇಷನ್ ನಂತರ, ಎಲ್ಲಾ ಸ್ವಯಂಸೇವಕರು ಆಸ್ಪತ್ರೆಯಲ್ಲಿ 28 ದಿನಗಳವರೆಗೆ ಪ್ರತ್ಯೇಕವಾಗಿ ಉಳಿದಿದ್ದರು.

ಈ ಮೊದಲು, ರಷ್ಯಾದಲ್ಲಿ ಸ್ವಯಂಸೇವಕರ ಗುಂಪಿನ ಮೇಲೆ ನಡೆಸಿದ ಕೋವಿಡ್-19 ಲಸಿಕೆ ಪರೀಕ್ಷೆಗಳ ಫಲಿತಾಂಶಗಳು ಅವರು ಕೊರೋನವೈರಸ್ ವಿರುದ್ಧ ಹೋರಾಡುವುದರಲ್ಲಿ ಯಶಸ್ವಿಯಾಗಿರುವುದು ತಿಳಿದು ಬಂದಿದೆ.

“ಗಮಾಲಿ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಪಡೆದ ಮಾಹಿತಿ ಪ್ರಕಾರ, ಮೊದಲ ಮತ್ತು ಎರಡನೆಯ ಗುಂಪುಗಳ ಸ್ವಯಂಸೇವಕರು ಕರೋನವೈರಸ್ ವಿರುದ್ಧ ಲಸಿಕೆ ಚುಚ್ಚುಮದ್ದಿನ ನಂತರ ರೋಗನಿರೋಧಕ ಪ್ರತಿಕ್ರಿಯೆಯನ್ನು ರೂಪಿಸುತ್ತಿದ್ದಾರೆಂದು ಸಾಬೀತುಪಡಿಸುತ್ತದೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಹಿಂದಿನ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ರಷ್ಯಾ ಇಲ್ಲಿಯವರೆಗೆ 719,449 ಕೋವಿಡ್-19 ಪ್ರಕರಣಗಳು ಮತ್ತು 11,188 ಸಾವುಗಳನ್ನು ವರದಿ ಮಾಡಿದೆ.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಪ್ರಸ್ತುತ ಕನಿಷ್ಠ 21 ಲಸಿಕೆಗಳು ಪ್ರಮುಖ ಪ್ರಯೋಗಗಳಲ್ಲಿವೆ. ಯುಎಸ್ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಾಗತಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 12.7 ದಶಲಕ್ಷಕ್ಕೆ ತಲುಪಿದೆ, ಆದರೆ ಸಾವುಗಳು 564,000 ಕ್ಕಿಂತ ಹೆಚ್ಚಾಗಿದೆ. ಭಾನುವಾರ ಬೆಳಿಗ್ಗೆ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 12,681,472 ಆಗಿದ್ದರೆ, ಸಾವುನೋವು 564,420 ಕ್ಕೆ ಏರಿದೆ.

ವಿಶ್ವದ ಅತಿ ಹೆಚ್ಚು ಸೋಂಕುಗಳು ಮತ್ತು ಸಾವುನೋವುಗಳಲ್ಲಿ ಯುಎಸ್ 3,245,158 ಮತ್ತು 134,764 ರಷ್ಟಿದೆ. 1,839,850 ಸೋಂಕುಗಳು ಮತ್ತು 71,469 ಸಾವುಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights