ಅಮೇರಿಕದಲ್ಲಿ ಕೋವಿಡ್-19ಗೆ ಪೋಷಕರನ್ನು ಕಳೆದುಕೊಂಡು ಅನಾಥರಾದ 43,000 ಮಕ್ಕಳು!

ಅಮೇರಿಕದಲ್ಲಿ ಕೋವಿಡ್-19ಗೆ ಪೋಷಕರನ್ನು ಕಳೆದುಕೊಂಡು ಕನಿಷ್ಠ 43,000 ಮಕ್ಕಳು ಅನಾಥರಾಗಿದ್ದಾರೆಂದು ಅಧ್ಯಯನವೊಂದು ಕಂಡುಹಿಡಿದಿದೆ.

ವಿಶ್ವದ ದೊಡ್ಡಣ್ಣ ಎಂದೇ ಹೆಸರಾದ ಅಮೇರಿಕದಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಜಾಮಾ ಪೀಡಿಯಾಟ್ರಿಕ್ಸ್‌ನಲ್ಲಿ ಏಪ್ರಿಲ್ 5 ರಂದು ಪ್ರಕಟವಾದ ಅಧ್ಯಯನದಲ್ಲಿ ಅಮೇರಿಕದ 17 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಅತೀ ಹೆಚ್ಚು ಮಕ್ಕಳು ಸಾಂಕ್ರಾಮಿಕ ರೋಗಕ್ಕೆ ಪೋಷಕರನ್ನು ಕಳೆದುಕೊಂಡಿದ್ದಾರೆ.

ಅವಿಭಕ್ತ ಕುಟುಂಬಳಿಗಿಂತ ವಿಭಕ್ತ ಕುಟುಂಬಗಳು ಹೆಚ್ಚಾಗಿರುವ ಅಮೇರಿಕದಲ್ಲಿ ಮಕ್ಕಳು ಅನಾಥವಾಗುತ್ತಿರುವ ಮಕ್ಕಳ ಸಂಖ್ಯೆ ದಿಗ್ಭ್ರಮೆಗೊಳಿಸಿದೆ. ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಮತ್ತೊಂದು ಅಘಾತಕಾರಿ ವಿಚಾರ ಅಂದರೆ ಅದೆಷ್ಟೋ ಮಕ್ಕಳಿಗೆ ತಮ್ಮ ಪೋಷಕರನ್ನು ಕಳೆದುಕೊಂಡ ವಿಚಾರವೇ ತಿಳಿಸಿಲ್ಲ.

ಅದೆಷ್ಟೋ ಮಕ್ಕಳು ತಮ್ಮ-ತಾಯಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ತಂದೆ, ತಾಯಿ, ಅಣ್ಣ, ತಂಗಿ, ಚಿಕ್ಕಮ್ಮ, ಚಿಕ್ಕಪ್ಪ ಸೇರಿದಂತೆ ಇನ್ನಿತರ ಪ್ರೀತಿ-ಪಾತ್ರರನ್ನು ಕಳೆದುಕೊಂಡು ಮಾನಸಿಕ ಸಾಮರ್ಥ್ಯ ವೃದ್ಧಿಗೆ ಅವರನ್ನು ಪುನ: ಶಾಲೆಗೆ ಕರೆತರುವುದೇ ಮಾರ್ಗವಾಗಿದೆ ಎಂದು ಅಮೆರಿಕದ ಮಕ್ಕಳ ತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಶಾಲಾ ವಾತಾವರಣ ಮಕ್ಕಳಿಗೆ ಹೊಸತನ ನೀಡಿ ಮಕ್ಕಳಿಗೆ ಪೋಷಕರನ್ನು ಮರೆಸುವ ಸಾಮಾರ್ಥ್ಯವನ್ನು ಒದಗಿಸುವಲ್ಲಿ ಸಹಾಯಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಅಮೇರಿಕದಲ್ಲಿ ಒಟ್ಟು ಸಾವಿನ ಸಂಖ್ಯೆ 6 ಲಕ್ಷ ತಲುಪಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights