ಸ್ಯಾಂಡಲ್‍ವುಡ್‍ನಲ್ಲಿ ಪವರ್ ನ ಖದರ್ ವಿಡಿಯೋ ಸಖತ್ ವೈರಲ್…!

ಸ್ಯಾಂಡಲ್ ವುಡ್ ನಲ್ಲಿ ಪವರ್ ನ ಖದರ್ ವಿಡಿಯೋ ಒಂದು ಹರಿದಾಡುತ್ತಿದ್ದು, ಸಖತ್  ವೈರಲ್ ಆಗುತ್ತಿದೆ.

ಹೌದು.. ದೊಡ್ಮನೆ ಹುಡುಗನ ಸಿನಿಮಾಗಳು ಅಂದ್ರೆ ಅದ್ರಲ್ಲೇನೋ ಒಂದು ವಿಶೇಷ ಇದ್ದೇ ಇರುತ್ತೆ. ಹಾಡು ಹಾಡುವುದರಲ್ಲಿ, ಡ್ಯಾನ್ಸ್ ಮಾಡುವುದರಲ್ಲಿ, ಫೈಟ್ ಮಾಡುವುದರಲ್ಲಿ ಅಷ್ಟೇ ಯಾಕೆ ಪ್ರೀತಿ ಮಾಡುವುದರಲ್ಲೂ ಸೈ ಎನಿಸಿಕೊಂಡು ಪುನೀತ್ ರಾಜಕುಮಾರ್ ಅವರ ಫಿಟ್ನೆಸ್ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಯಸ್ಸು 45 ಅದರೂ ಎಂಗ್ ಬಾಯ್ ಅಂತೆ ಪುನೀತ್ ಕಾಣಿಸೊಖೆ ಕಾರಣ ಏನು ಗೊತ್ತಾ..? ಅವರ ಮಾಡುವ ಫಿಟ್ನೆಸ್. ಇದುವೇ ಅವರು ತುಂಬಾ ಯಂಗ್ ಆಗಿ ಕಾಣೋದಕ್ಕೆ ಟಾಪ್ ಸೀಕ್ರೇಟ್. ಈ ಲಾಖ್ ಡೌನ್ ಸಮಯದಲ್ಲೂ ಅಪ್ಪು ತಮ್ಮ ಟಾಪ್ ಸ್ಈಕ್ರೇಟ್ ನ್ನು ಚಾಚುತಪ್ಪದೇ ಪಾಲಿಸುತ್ತಾರೆ. ಈ ವಿಡಿಯೋವೇ ನೋಡಿ ಸದ್ಯ ಸೋಷಿಯಲ್ ಮೀಡಿಯದಲ್ಲಿ ತುಂಬಾನೇ ವೈರಲ್ ಆಗಿದೆ. ಇದೇ ದೇಹದಂಡನೆಗೀಗ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅಪ್ಪು ಅವರ ಈ ಕಸರತ್ತಿನ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಿರ್ದೇಶಕ ಸಂತೋಷ್ ಅನಂದ್‍ರಾಮ್, `ಪವರ್ ಸ್ಟಾರ್` ಎಂಬ ಬಿರುದು ಶಿವಣ್ಣ ಕೊಟ್ಟಿದ್ದಕ್ಕೂ, ಅಭಿಮಾನಿಗಳು ಎದೆಯಲ್ಲಿಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ, ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕವಾಗಿದೆ. ಪವರ್ ಸ್ಟಾರ್ 45ರ ವಯಸ್ಸಿನಲ್ಲೂ ಕಾಲೇಜು ಯುವಕನ ಪಾತ್ರ ಮಾಡುವಷ್ಟು ಫಿಟ್ ಆಗಿ ಇದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್ ಸ್ಟಾದಲ್ಲಿ ಶೇರ್ ಮಾಡಿಕೊಂಡು ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದಾರೆ.

https://twitter.com/SanthoshAnand15/status/1253014574057439232

ಈ ವಿಡಿಯೋದಲ್ಲಿ ಅಪ್ಪು ಜಿಗಿದು ಬಂದು ಲೆಗ್ ಪಂಚ್ ಹಾಗೂ ಬ್ಯಾಕ್ ಪ್ಲಿಪ್ ಮಾಡಿದ 17 ಸೆಂಕೆಂಡ್ ವಿಡಿಯೋ ಇದೆ. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.ಸದ್ಯ ಲಾಕ್‍ಡೌನ್ ನಡುವೆ ಮನೆಯಲ್ಲೇ ಕುಟುಂಬದವರ ಜೊತೆ ಕಾಲಕಳೆಯುತ್ತಿರುವ ಪವರ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ.

ಈ ಹಿಂದೆ ಕೊರೊನಾ ನಿರಾಶ್ರಿತರಿಗಾಗಿ ಪವರ್ ಸ್ಟಾರ್ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಜೊತೆಗೆ ಮನೆಯಲ್ಲಿ ಕೊರೊನಾ ಬಗ್ಗೆ ಪವರ್ ಸ್ಟಾರ್ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲಿ ಮಾರ್ಚ್ 17ರಂದು ಇದ್ದ ಅವರ ಹುಟ್ಟುಹಬ್ಬವನ್ನೂ ಅಪ್ಪು ಆಚರಿಸಿಕೊಂಡಿರಲಿಲ್ಲ.

ಪುನೀತ್ ರಾಜ್‍ಕುಮಾರ್ ಸದ್ಯ ಯುವರತ್ನ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಅನಂದ್‍ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್, ಅಪ್ಪು ಸಿನಿಮಾದ ಬಳಿಕ ಕಾಲೇಜು ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಆಗಲೇ ಮುಗಿದಿದ್ದು, ಇನ್ನುಳಿದ ಚಿತ್ರೀಕರಣ ಕೊರೊನಾ ವೈರಸ್ ನಿಂದ ಸಾಧ್ಯವಾಗಿಲ್ಲ. ಲಾಕ್ ಡೌನ್ ನಂತರ ಸಿನಿಮಾ ಶೂಟಿಂಗ್ ಮುಂದುವರೆಯುವ ಸಾಧ್ಯತೆ ಇದ್ದು. ಇದೇ ವರ್ಷದಲ್ಲಿ ಯುವರತ್ನ ತೆರೆಗಪ್ಪಳಿಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights