ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟ…!
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವಸ್ತು ಸ್ಪೋಟಗೊಂಡು ಸ್ಥಳದಲ್ಲಿ ಬಿಗುವಿನ ವಾತಾವಣ ಸೃಷ್ಟಿ ಮಾಡಿದೆ.
ಆಂದ್ರಪ್ರದೇಶ ಮೂಲದ ಹುಸೇನ್ ಸಾಬ್ ನಾಯಕವಾಲೆ (22) ವ್ಯಕ್ತಿಯ ಕೈಯಲ್ಲಿದ್ದ ಅನುಮಾನಾಸ್ಪದ ಬಾಕ್ಸ್ ಸ್ಪೋಟಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲು ಮಾಡಲಾಗಿದೆ. ಇದ್ದಕ್ಕಿದಂತೆಯೇ ಬಾಕ್ಸ್ ಬ್ಲಾಸ್ಟ್ ಆಗಿದ್ದು ರೈಲ್ವೆ ನಿಲ್ದಾಣದಲ್ಲಿ ಆತಂಕ ಸೃಷ್ಟಿ ಮಾಡಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್ ದಿಲೀಪ್ ಇಬ್ಬರು ಡಿಸಿಪಿಗಳು ಹಾಗೂ ರೇಲ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಶ್ವಾನದಳದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ.