ಗಾಳಿ ಮತ್ತು ಸೊಳ್ಳೆಯಿಂದ ಕೊರೊನಾ ಹರಡುವುದಿಲ್ಲ, ಭಯಪಡುವ ಅಗತ್ಯವಿಲ್ಲ ಎಂದು WHO ಸ್ಪಷ್ಟನೆ!

ಕೊರೊನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಡೀ ಜಗತ್ತು ಕೋವಿಡ್​19 ದಾಳಿಯಿಂದ ಕಂಗೆಟ್ಟಿದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಪಾಸಿಟಿವ್​​​ ಕೇಸ್​​ಗಳು ಹೆಚ್ಚಾಗುತ್ತಿದೆ. ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಮಾತ್ರ ಹರಡುತ್ತಿದೆ ಅನ್ನುವುದು ಗೊತ್ತಿದೆ. ಸೋಂಕಿತ ವ್ಯಕ್ತಿಯ ಡೈರೆಕ್ಟ್​​ ಅಥವಾ ಇನ್​ ಡೈರೆಕ್ಟ್ ಕಾಂಟಾಕ್ಟ್​ನಿಂದ ಕೊರೊನಾ ಹರಡುತ್ತಿದೆ ಅನ್ನುವುದು ಸಂಶೋಧನೆಯಲ್ಲಿ ತಿಳಿಯುತ್ತಿದೆ. ಆದರೆ ಈಗ ಸೊಳ್ಳೆಯಿಂದಲೂ ಕೊರೊನಾ ಹರಡುತ್ತಿದೆ ಅನ್ನುವ ಸುದ್ದಿ ಎಲ್ಲಾ ಕಡೆಯೂ ಹರಡುತ್ತಿದೆ.

ಈ ಹಿಂದೆ ಗಾಳಿಯಲ್ಲಿ ಕೊರೊನಾ ಹರಡುತ್ತದೆ ಅನ್ನುವ ಸುದ್ದಿಯಿತ್ತು. ಆದ್ರೆ World health organization ಇದನ್ನು ತಳ್ಳಿಹಾಕಿದೆ. ಆದ್ರೆ ಕೆಲವು ವಿಜ್ಞಾನಿಗಳು ಗಾಳಿಯಲ್ಲಿ ಕೊರೊನಾ ಹರಡುತ್ತಿದೆ ಅನ್ನುವುದನ್ನು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಈಗ ಸೊಳ್ಳೆಯಿಂದ ಕೊರೊನಾ ಹರಡುತ್ತಿದೆ ಅನ್ನುವುದನ್ನು ಕೂಡ WHO ನಿರಾಕರಿಸಿದೆ. ಗುಡ್​ನ್ಯೂಸ್​ ಅಂದ್ರೆ ಸೊಳ್ಳೆಗಳಿಂದ ಕೊರೊನಾ ಹರಡಲು ಸಾಧ್ಯವಿಲ್ಲ ಅನ್ನುವುದನ್ನು ವಿಜ್ಞಾನಿಗಳು ಕೂಡ ಹೇಳಿದ್ದಾರೆ.

ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಜರ್ನಲ್​ನಲ್ಲಿ ಈ ವರದಿ ಪ್ರಕಟವಾಗಿದ್ದ, ಸೊಳ್ಳೆಗಳಿಗೂ ಕೊರೋನಾ ಸೋಂಕು ತಗುಲಬಹುದಾ? ಆ ಮೂಲಕ ಮನುಷ್ಯರಿಗೂ ಸೋಂಕು ತಗುಲಬಹುದಾ ಎಂಬ ನಿಟ್ಟಿನಲ್ಲಿ ಈ ಸಂಶೋಧಕರು ವಿವಿಧ ಪ್ರಯೋಗಗಳನ್ನ ನಡೆಸಿ ಆ ವಿವರವನ್ನು ಜರ್ನಲ್​ನಲ್ಲಿ ಪ್ರಕಟಿಸಿದ್ದಾರೆ.

ಏಡಿಸ್ ಏಜಿಪ್ತಿ Aedes Aegypti), ಏಡಿಸ್ ಆಲ್ಬೋಪಿಕ್ಟಸ್ (Aedes Albopictus) ಮತ್ತು ಕ್ಯುಲೆಕ್ಸ್ ಕ್ಯುಂಕೆಫ್ಯಾಸಿಯಾಟಸ್ (Culex Quinquefasciatus) ಸೊಳ್ಳೆಗಳ ಮೇಲೆ ಪ್ರಯೋಗ ನಡೆಯಿತು. ಈ ಮೂರು ತಳಿಯ ಸೊಳ್ಳೆಗಳು ಚೀನಾದಲ್ಲಿ ಸಾಮಾನ್ಯವಾಗಿ ಸಿಗುತ್ತವೆ ಎಂಬುದು ಇಲ್ಲಿ ಗಮನಾರ್ಹ. ಕೋವಿಡ್-19 ವೈರಾಣು ಈ ಮೂರು ಸೊಳ್ಳೆಗಳಿಗೆ ಸೋಂಕು ಉಂಟು ಮಾಡಲು ಅಸಮರ್ಥವಾಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಸೊಳ್ಳೆಯ ದೇಹದೊಳಗೆ ಕೊರೋನಾ ವೈರಸ್ ಸಂತತಿ ಬೆಳೆಯಲು ಅಸಾಧ್ಯವಾಗಿದೆ. ಹೀಗಾಗಿ ಸೊಳ್ಳೆಗಳಿಂದ ಕೊರೊನಾ ಹರಡುವುದಿಲ್ಲ ಅನ್ನುವುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights