ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲಿಸಿದ ಪೊಲೀಸ್‌

ಭೂಸ್ವಾಧೀನಕ್ಕಾಗಿ ಬಂದ ಅಧಿಕಾರಿಗಳನ್ನು ಸಮಯಾವಕಾಶ ಕೇಳಿದರೂ ಬಿಡೆ, ಬೆಳೆಯನ್ನು ಹಾಳುಮಾಡಿ, ರೈತ ಕುಟುಂಬವನ್ನು ಅಮಾನವೀಯವಾಗಿ ಪೊಲೀಸರು ಥಳಿಸಿದ ಘಟನೆ ಮಧ್ಯಪ್ರದೇಶದ ಗುಣಾದಲ್ಲಿ ನಡೆದಿತ್ತು. ದಲಿತ ರೈತ ಕುಟುಂಬದ ಮೇಲೆ ನಡೆದ ಅಮಾನವೀಯ ವರ್ತನೆಯಿಂದ ಅಲ್ಲಿಯ ಜಿಲ್ಲಾಧಿಕಾರಿ ಮತ್ತು ಎಸ್‌ಪಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಆದರೆ, ಇಂದು ಮತ್ತೆ ಅದೇ ಜಿಲ್ಲೆಯಲ್ಲಿಯೇ ಮತ್ತೊಂದು ಅಮಾನವೀಯ ಹೇಯ ಕೃತ್ಯ ನಡೆದಿದೆ. ಗುಣಾದ ನಡುಬೀದಿಯಲ್ಲಿ ದಲಿತ ಯುವಕರನ್ನು ಕ್ರೂರವಾಗಿ ಹಲ್ಲೆಮಾಡುವ ವಿಡಿಯೋ ವೈರಲ್ ಆಗಿದೆ.

ಕಳ್ಳತನದ ಅನುಮಾನದ ಮೇಲೆ ಧರ್ಮೇಂದ್ರ ಎಂಬ ದಲಿತ ಯುವಕನನ್ನು ನಡುಬೀದಿಯಲ್ಲಿ ಥಳಿಸಲಾಗಿದೆ. ಹೊಡೆತದಿಂದ ಅವನು ಪ್ರಜ್ಞಾಹೀನನಾದರು ಸಹ ಬಿಡದೇ ಅವನ ಕುತ್ತಿಗೆಗೆ ಬಟ್ಟೆ ಕಟ್ಟಿ ಬೀದಿಯಲ್ಲಿ ಎಳೆದಾಡಿರುವ ಹೃದಯ ವಿದ್ರಾವಕ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.

ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಸಹ ಪೊಲೀಸರು ದಾಳಿಕೋರರ ಮೇಲೆ ಕ್ರಮ ಕೈಗೊಳ್ಳದೇ ಹಲ್ಲೆಗೊಳಗಾದ ಧರ್ಮೇಂದ್ರ ವಿರುದ್ಧ ಮಾತ್ರ ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ ಎಂದು ಹರ್ಷ ಅಂಬೇಡ್ಕರ್‌ವಾದಿ ಎಂಬುವವರು ಆರೋಪಿಸಿದ್ದಾರೆ.

ನಮ್ಮ ಸಮಾಜದಲ್ಲಿ ದಲಿತ ವರ್ಗವಾಗಿ ಬದುಕಲು ಎಷ್ಟು ಕಷ್ಟಪಡಬೇಕು, ಎಷ್ಟು ಅನಾನುಕೂಲ ಎದುರಿಸಬೇಕು ಎಂದು ನಾನು ಆಶ್ಚರ್ಯ ಪಡುತ್ತೇನೆ. ದಿ ದಲಿತ್ ವಾಯ್ಸ್ ಪ್ರತಿದಿನ ಈ ರೀತಿಯ ಅಹಿತಕರ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. ಅದನ್ನು ಫಾಲೋಮಾಡಿ ಎಂದು ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights