ದೇಶದಲ್ಲಿ 42,625 ಹೊಸ ಕೊರೊನಾ ಕೇಸ್ ಪತ್ತೆ : 562 ಜನ ಬಲಿ..!

ದೇಶದಲ್ಲಿ ಕೊರೊನಾ ಏರಿಳಿತ ಮುಂದುವರೆದಿದ್ದು ಇಂದು 42,625 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 562 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 5,395 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,10,353 ರಷ್ಟಿದೆ. ಳೆದ 24 ಗಂಟೆಗಳಲ್ಲಿ ಒಟ್ಟು 36,668 ರೋಗಿಗಳು ಚೇತರಿಸಿಕೊಂಡಿದ್ದು ದೇಶಾದ್ಯಂತ ಒಟ್ಟು ಚೇತರಿಕೆಯಾದವರ ಸಂಖ್ಯೆ 3,09,33,022ರಷ್ಟಿದೆ.

ಇನ್ನೂ ದೇಶದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ 23,676 ಹೊಸ ಪ್ರಕರಣಗಳೊಂದಿಗೆ ಕೇರಳ ಅಗ್ರಸ್ಥಾನದಲ್ಲಿದೆ.

42,625 ಹೊಸ ಕೊರೊನಾ ಪ್ರಕರಣಗಳಲ್ಲಿ ಕೇರಳದಲ್ಲಿ 23,676 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 6,005 ಪ್ರಕರಣಗಳು, ತಮಿಳುನಾಡು 1,908 ಪ್ರಕರಣಗಳು, ಕರ್ನಾಟಕ 1,674 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 1,546 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 562 ಸಾವುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 177, ಕೇರಳದಲ್ಲಿ 148 ದೈನಂದಿನ ಸಾವುಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 62,53,741 ಡೋಸ್‌ಗಳನ್ನು ನೀಡಲಾಗಿದೆ. ಈವರೆಗೆ ಒಟ್ಟು 48,52,86,570ಡೋಸ್‌ಗಳನ್ನು ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 18,47,518 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights