ಭಾರತಕ್ಕೆ ಸಂಕಷ್ಟಗಳ ಹಾದಿ; ಕೊರೊನಾ, ಪೆಟ್ರೋಲ್‌ ಬೆಲೆ, ಮಿಡತೆ ಹಾವಳಿ! ಬಸವಳಿದ ಭಾರತೀಯ

ಒಂದಡೆ ಕಳೆದ 20 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್​ ಬೆಲೆ ಏರುತ್ತಲೇ ಇದೆ. ಇನ್ನೊಂದಡೆ ಗಡಿಯಲ್ಲಿ ಉಂಟಾದ ಘರ್ಷಣೆಯಿಂದ ಹಾಗು ವಿರೋಧ ಪಕ್ಷಗಳ  ಒತ್ತಡದಿಂದ ರಾಜಧಾನಿಯಲ್ಲಿ ಬಿಸಿ ಎರುತ್ತಿದೆ, ಅದಕ್ಕೆ ಕರೋನಾ ವೈರಸ್ ಸಾಥ್ ಬೆರೆ ಇದೆ, ಇದರ ಮಧ್ಯ ರಾಜಧಾನಿ ದೆಹಲಿ ಮೇಲೆ ಮತ್ತೊಂದು ಅಟ್ಯಾಕ್​​ ನಡೆದಿದೆ.

ಚೀನಾ ಮತ್ತು ಪಾಕ್​ ಬೆದರಿಕೆಗಳನ್ನು ಗಡಿಯಲ್ಲೇ ಮಟ್ಟಹಾಕುತ್ತಿರುವ ಭಾರತ ಈಗ ಕೀಟದ ಕಾಟಕ್ಕೆ ಹೆದರಿದೆ. ರಾಜಧಾನಿ ದೆಹಲಿ ಲೊಕಸ್ಟ್​​ ಕೀಟಕ್ಕೆ ಕಂಗೆಟ್ಟಿದೆ. ಮೊದಲೇ ಕೊರನಾಕ್ಕೆ ಹೆದರಿ ಮನೆಯೊಳಗೆ ಕುಳಿತಿದ್ದವರು ಈಗ ಕಿಟಕಿ ಬಾಗಿಲುಗಳನ್ನು ಕೂಡ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

03 ದಶಕಗಳ ಬಳಿಕ ಭಾರತದಲ್ಲಿ ಈ ರೀತಿಯ ಕೀಟಗಳು ರೈತರ ಪಾಲಿಗೆ ಯಮರೂಪಿಯಾಗಿವೆ. ಕೀಟಗಳಿಂದ ರೈತರ ಬೆಳೆಗಳನ್ನು ರಕ್ಷಿಸಲು ಕೆಲವು ರಾಜ್ಯ ಸರಕಾರಗಳು ಡ್ರೋಣ್​ ಪ್ರಯೋಗವನ್ನೂ ಮಾಡಿದ್ದವು. ಆದ್ರೆ ಈ ಲೊಕಸ್ಟ್​ಗಳ ಕಂಟ್ರೋಲ್​ ಮಾತ್ರ ಇನ್ನೂ ಸಾಧ್ಯವಾಗಿಲ್ಲ.

ಅಂದಹಾಗೇ, ಈ ಲೊಕಸ್ಟ್​ ಕೀಟಗಳು ಆಫ್ರಿಕಾದಲ್ಲಿ ತಿಂದು ತೇಗಿವೆ. ಅಲ್ಲಿಂದ ಇರಾನ್​, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಬೆಳದ ಬೆಳೆಗಳನ್ನು ನೆಲಸಮ ಮಾಡಿಬಿಟ್ಟಿವೆ. ಬಕಾಸುರ ಹೊಟ್ಟೆಯ ಈ ಲೊಕಸ್ಟ್​ಗಳು ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್​, ರಾಜಸ್ಥಾನ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ತನ್ನ ಕೆಲಸ ಮುಗಿಸಿ ಈಗ ರಾಷ್ಟ್ರರಾಜಧಾನಿಯತ್ತ ಎಂಟ್ರಿಕೊಡುತ್ತಿದೆ. ಹಗಲಿನ ವೇಳೆಯಲ್ಲಿ ಮಾತ್ರ ಚಲಿಸುವ ಈ ಕೀಟಗಳನ್ನು ಕಂಟ್ರೋಲ್​ ಮಾಡಲು ಸರಕಾರಗಳು ಹರಸಾಹಸ ಮಾಡುತ್ತಿದೆ.

ಉತ್ತರ ಪ್ರದೇಶದ ಗಾಝಿಯಬಾದ್ ಮೂಲಕ ರಾಷ್ಟ್ರರಾಜಧಾನಿ ದೆಹಲಿ ಪ್ರವೇಶಕ್ಕೆ ಲೊಕಸ್ಟ್​ಗಳು ಸಜ್ಜಾಗುತ್ತಿರುವಾಗಲೇ ಗುರ್​ ಗಾಂವ್​ ಸ್ಥಳೀಯ ಆಡಳಿತ ಜನರಿಗೆ ಎಲ್ಲಾ ಕಿಟಿಕಿ ಬಾಗಿಲುಗಳನ್ನು ಮುಚ್ಚುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ ಈ ಕೀಟಗಳನ್ನು ಜೋರಾದ ಶಬ್ದದಿಂದ ಮಾತ್ರ ದೂರವಿಡಲು ಸಾಧ್ಯವಿರುವುದರಿಂದ​​ ಆದಷ್ಟು ಶಬ್ದ ಮಾಡುವಂತೆ ಸೂಚನೆ ನೀಡಿದೆ.

ಒಂದು ಕಡೆ ಕೊರೊನಾ ಮತ್ತೊಂದು ಕಡೆ ಲೊಕಸ್ಟ್​. ಸರಕಾರಗಳ ಪಾಲಿಗೆ ಕೊರೊನಾ ಕಟ್ಟಿಹಾಕುವುದೇ ಸವಾಲಿನ ಕೆಲಸವಾಗಿರುವ ಈ ಸಮಯದಲ್ಲಿ ಕೀಟಗಳ ಕಾಟವನ್ನು ಹೇಗೆ ತಪ್ಪಿಸುವುದು ಅನ್ನೋದು ಮತ್ತೊಂದು ಚಿಂತೆಯಾಗಿದೆ.

ಲೊಕಸ್ಟ್​​ ದೈತ್ಯ ಕೀಟ. ಇದರ ಟಾರ್ಗೆಟ್​​ ರೈತರು ಬೆಳೆಯುವ ಬೆಳೆಗಳು. ಅದ್ರಲ್ಲೂ ಸೀಸನಲ್​ ಬೆಳೆಗಳ ಮೇಲೆ ಈ ಲೊಕಸ್ಟ್​ಗಳು ಅಟ್ಯಾಕ್​ ಮಾಡ್ತು ಅಂದ್ರೆ ಸಾಕು ಆ ಬೆಳೆಗಳ ಕಥೆ ಮುಗಿದ ಹಾಗೆಯೇ. ಕೇವಲ ಹಸಿರು ಬೆಳೆಗಳನ್ನು ನಾಶಪಡಿಸುವ ಈ ಕೀಟಗಳು ರೈತರ ಪಾಲಿಗೆ ಯಮದೂತ. ಗುಂಪು ಗುಂಪಾಗಿ ಹಾರುವ ಈ ಕೀಟಗಳು ಗಾಳಿ ಹೇಗೆ ಚಲಿಸುತ್ತದೋ ಅದೇ ಮುಖದಲ್ಲಿ ಚಲಿಸಿಬಿಡುತ್ತವೆ. ದಿನಕ್ಕೆ ಸರಿಸುಮಾರು 150 ಕಿಲೋಮೀಟರ್​ ಚಲಿಸುವ ಈ ಲೊಕಸ್ಟ್​ಗಳು ಕೊರೊನಾದ ಜೊತೆ ರೈತರ ಹೊಟ್ಟೆಗೆ ಚೆನ್ನಾಗಿ ಹೊಡೆಯುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights