ನಾನು ಕೂಡ ನೆಪೋಟಿಸಂಗೆ ಬಲಿಯಾಗಿದ್ದೆ: ನಟ ಸೈಫ್ ಆಲಿ ಖಾನ್
ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚು ಖ್ಯಾತಿ ಪಡೆಯುತ್ತಿರುವ ನಟ ಸೈಫ್ ಆಲಿ ಖಾನ್. ಈ ವರ್ಷ ಬಿಡುಗಡೆಯಾದ ಅವರ ‘ಜವಾನಿ ಜಾನೆಮನ್’ ಮತ್ತು ಐತಿಹಾಸಿಕ ಚಿತ್ರ ‘ತನ್ಹಾಜಿ: ದ ಅನ್ ಸಂಗ್ ವಾರಿಯರ್’ ಸಿನಿಮಾಗಳಲ್ಲಿ ಅದ್ಭುತ ನಟನೆ ಮಾಡಿರುವ ಸೈಫ್ ಸಿನಿ ಪ್ರಿಯರ ಮನ ಗೆದ್ದಿದ್ದಾರೆ.
ಎರಡು ಹಿಟ್ ಸಿನಿಮಾಗಳನ್ನು ನೀಡಿದ ಸೈಫ್ ಅಲಿ ಖಾನ್ ಅವರನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಸಂದರ್ಶಿಸಿದ್ದು, ಆ ಸಂದರ್ಭದಲ್ಲಿ ತಾವೂ ಕೂಡ ನೆಪೋಟಿಸಂಗೆ ಒಳಗಾಗಿದ್ದಾಗಿ ಸೈಫ್ ತಿಳಿಸಿದ್ದಾರೆ.
ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತವಿದೆ ಎಂದು ನಟಿ ಕಂಗನಾ ರಾನಾವತ್ ಆರೋಪಸಿದ್ದು, ಈ ಬಗ್ಗೆ ಮಾತನಾಡಿದ ಸೈಫ್,ಕಂಗನಾ ಏನು ಹೇಳಿದರು ಎಂದು ನನಗೆ ಗೊತ್ತಿಲ್ಲ. ಆದರೆ, ಭಾರತದಲ್ಲಿ ಅಸಮಾನತೆಯಿದ್ದು ಅವುಗಳನ್ನು ಹೊರತೆಗೆಯಬೇಕು. ಸ್ವಜನಪಕ್ಷಪಾತ, ತಮ್ಮವರ ಬಗ್ಗೆ ಒಲವು, ಗುಂಪು ಕಟ್ಟಿಕೊಳ್ಳುವಿಕೆ ಇವೆಲ್ಲಾ ಬೇರೆ ವಿಷಯ. ನಾನು ಕೂಡ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದೆ, ಆದರೆ ಅದನ್ನು ಯಾರೂ ಮುಂದೆ ಬಂದು ಮಾತನಾಡುವುದಿಲ್ಲ, ಈಗಲಾದರೂ ಚಿತ್ರೋದ್ಯಮದಲ್ಲಿ ಅದನ್ನು ಬಹಿರಂಗವಾಗಿ ಧೈರ್ಯವಾಗಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸತ್ಯ ಯಾವಾಗಲೂ ಕಠಿಣವಾಗಿರುತ್ತದೆ. ಈ ಬಗ್ಗೆ ಜನರಿಗೆ ಆಸಕ್ತಿ ಉಳಿದುಕೊಂಡಿಲ್ಲ, ಇನ್ನು ನಾವು ಹೊಸ ವಿಷಯಗಳತ್ತ ಆಲೋಚನೆ ಮಾಡಬೇಕೆಂಬುದು ನನ್ನ ಭಾವನೆ, ಇದು ಹೊಸದನ್ನು ಯೋಚಿಸುವ ಹೊಸ ವಿಷಯಗಳನ್ನು, ಸವಾಲುಗಳನ್ನು ಎದುರಿಸಿ ಕಲಿತುಕೊಳ್ಳುವ ಸಮಯ ಎಂದಿದ್ದಾರೆ.
ಇದನ್ನೂ ಓದಿ: “ಭಾರತ – ಚೀನಾ ಘರ್ಷಣೆಯ ಬಗ್ಗೆ ಮೋದಿ ಹೇಳಿಕೆ ಸರಿಯಾಗಿದೆ…ಆದರೆ ಮೋದಿ ಸರ್ಕಾರವೇ ಘರ್ಷಣೆ ಗೆ ಕಾರಣವೂ ಆಗಿದೆ”