ಬಾಯ್‌ಕಾಟ್‌ ಚೀನಾ: ಜೊಮ್ಯಾಟೋ ಟೀ-ಶರ್ಟ್‌ ಸುಟ್ಟು ಪ್ರತಿಭಟಿಸಿದ ಸಿಬ್ಬಂದಿ

ಲಡಾಖ್ ಗಡಿಯಲ್ಲಿ ಚೀನೀ ಸೈನಿಕರು ಭಾರತೀಯ 20 ಸೈನಿಕರ ಹತ್ಯೆ ಮಾಡಿದ ನಂತರ ಉದ್ಭವಿಸಿರುವ ಉದ್ವಿಗ್ನ ಸ್ಥಿತಿ ಇನ್ನೂ ಮುಂದುವರೆದಿದೆ. ಭಾರತ-ಚೀನಾ ನಡುವಿನ ಸಂಘರ್ಷದಿಂದಾಗಿ ಭಾರತದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕೆಂಬ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಲೇ ಇವೆ. ಇದು ಇದೇ ಮೊದಲ ಬಾರಿಯೇನೂ ಅಲ್ಲ.

ಬಾಯ್‌ಕಾಟ್‌ ಚೀನಾ ಅಭಿಯಾನಕ್ಕೆ ಕೈಜೋಡಿಸಿರುವ ಜೊಮ್ಯಾಟೋ ಸಿಬ್ಬಂದಿ ಜೊಮ್ಯಾಟೋ ಕಂಪನಿಯಲ್ಲಿ ಚೀನಾ ದೇಶದ ಹೂಡಿಕೆ ಮಾಡಿರುವುದನ್ನು ವಿರೋಧಿಸಿ ಜೊಮ್ಯಾಟೋ ಕಂಪನಿಯ ಟಿ-ಶರ್ಟ್​ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರು. ಬಳಿಕ ಚೀನಾ ಗಡಿಯಲ್ಲಿ ಭಾರತೀಯ ಸೇನೆಯನ್ನು ಬಿಗಿಗೊಳಿಸಲಾಗಿತ್ತು. ಬೆಹಾಳದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ಪ್ರತಿಭಟನಾಕಾರರು, ಚೀನಾ ಹೂಡಿಕೆ ಮಾಡಿದ್ದರಿಂದ ಜೊಮ್ಯಾಟೋ ಕಂಪನಿಯ ಉದ್ಯೋಗ ತೊರೆದಿರುವುದಾಗಿ ಹೇಳಿದ್ದಾರೆ. ಜಿಮ್ಯಾಟೊ ಮೂಲಕ ಆಹಾರಕ್ಕೆ ಆರ್ಡರ್ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್​ನ ಭಾಗವಾದ ಆಂಟ್ ಫೈನಾನ್ಷಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು. ಇತ್ತೀಚಿಗೆ ಆಂಟ್ ಫೈನಾನ್ಷಿಯಲ್ ಕೂಡ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಭಾರತ ದೇಶದಲ್ಲಿ ಲಾಭ ಗಳಿಸುತ್ತಿರುವ ಚೀನಾ ಕಂಪನಿಗಳು ನಮ್ಮ ದೇಶದ ಸೈನಿಕರ ಮೇಲೆ ದಾಳಿ ಮಾಡುತ್ತಿವೆ. ನಮ್ಮ ಭೂಮಿಯನ್ನು
ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜೊಮ್ಯಾಟೋ ಟೀ-ಶರ್ಟ್​ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಚೀನಾ ಉತ್ಪನ್ನಗಳ ತಿಸ್ಕರಿಸಲು ಸರ್ಕಾರ ಕರೆ; ಟಿಕ್‌ಟಾಕ್‌ನಲ್ಲಿದೆ ಕೇಂದ್ರ ಸರ್ಕಾರ ಅಧಿಕೃತ ಖಾತೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights