ಅಮೆರಿಕಾದಲ್ಲಿ ಹೆಚ್‌-1ಬಿ ವೀಸಾ ವಿತರಣೆ ರದ್ದು; ಭಾರತೀಯ ವಲಸಿಗರಿಗೆ ನಿರಾಶೆ!

ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಹೆಚ್ -1 ಬಿ ವೀಸಾಗಳ ವಿತರಣೆಯೂ ಸೇರಿದಂತೆ ಎಲ್ಲಾ ವಿದೇಶಿ ವೃತ್ತಿಪರ ವೀಸಾಗಳ ವಿತರಣೆಯನ್ನು ಅಮಾನತುಗೊಳಿಸುವುದಾಗಿ  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಭಾರತೀಯ ಐಟಿ ವೃತ್ತಿಪರರಿಗೆ ಅನುಕೂಲವಾಗುತ್ತಿದ್ದ ಎಚ್ -1 ಬಿ ಮತ್ತು ಎಲ್ 1 ಸೇರಿದಂತೆ ವಿದೇಶಿ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದರಿಂದ ಅಮೆರಿಕದಲ್ಲಿ 5,25,000 ಉದ್ಯೋಗಗಳು ಮುಕ್ತವಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣವನ್ನು ತಗ್ಗಿಸಲು ಮತ್ತು ವಲಸೆ ಉದ್ಯೋಗಿಗಳನ್ನು ನಿರ್ಬಂಧಿಸಿ ಅಮೆರಿಕನ್ನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಎಚ್‌-1ಬಿ, ಎಲ್‌-1 ವೀಸಾಗಳು ಮತ್ತು ಇತರೆ ತಾತ್ಕಾಲಿಕ ಕೆಲಸಗಳ ವಿಸಾಗಳ ವಿತರಣೆಯನ್ನು ಅಮೆರಿಕ ತತ್ಕಾಲಿಕವಾಗಿ ನಿರ್ಬಂಧಿಸಿದೆ. ಇದರಿಂದಾಗಿ ಭಾರತೀಯರು ಸೇರಿದಂತೆ ಇತರ ದೇಶಗಳಿಂದ ಅಮೆರಿಕಗೆ ಉದ್ಯೋಗ ಹರಸಿ ವಲಸೆ ಹೋಗುವವರಿಗೆ ಅವಕಾಶಗಳಿಲ್ಲವಾದ್ದರಿಂದ ಅಮೆರಿಕಾ ಉದ್ಯೋಗ ಬಯಸುವವರಿಗೆ ನಿರಾಶೆ ಉಂಟಾಗಲಿದೆ.

2020 ರ ಅವಧಿಯಲ್ಲಿ ಅಮೆಕನ್ನರಿಗೆ ಉದ್ಯೋಗಗಳನ್ನು ಮುಕ್ತಗೊಳಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಫಲವಾಗಿ ಅಮೆರಿಕನ್ನರಿಗೆ ಸುಮಾರು 5.25 ಲಕ್ಷ ಉದ್ಯೋಗಗಳು ದೊರೆಯಲಿವೆ ಎಂದು ತಿಳಿದುಬಂದಿದೆ.

“ಕೊರೊನಾ ವೈರಸ್‌ ಸೋಂಕಿನಿಂದಾಗಿ ಅಮೆರಿಕದ ಜನತೆ ಮತ್ತು ಆರ್ಥಿಕತೆ ಸಾಕಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಹಾಗಾಗಿ ಆದಷ್ಟು ಬೇಗ ಅಮೆರಿಕನ್ನರು ಉದ್ಯೋಗಕ್ಕೆ ಮರಳುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಆ ಕಾರಣಕ್ಕಾಗಿ ಇಷ್ಟು ಬೃಹತ್ ಸಂಖ್ಯೆ ಉದ್ಯೋಗಗಳು ಅಮೆರಿಕನ್ನರಿಗೆ ಮುಕ್ತವಾಗಿ ದೊರೆಯುವಂತೆ ಮಾಡುವುದು ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್ ಅವರ ಘೋಷಣೆ ಪ್ರಕಾರ H-1B, H-4, H-2B ವೀಸಾ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಹಲವಾರು ವಲಸೆರಹಿತ ವೀಸಾಗಳನ್ನು ಪ್ರಸಕ್ತ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಟ್ರಂಪ್‌ ಅವರ ನಿರ್ಧಾರವನ್ನೂ ವಿರೋಧಿಸಿರುವ ಗೂಗಲ್‌ ಕಂಪನಿಯ ಸಿಇಓ ಸುಂದರ್‌ ಪಿಚೈ, “ಅಮೆರಿಕದ ಆರ್ಥಿಕ ಯಶಸ್ಸಿಗೆ ವಲಸೆ ಉದ್ಯೋಗಿಗಳ ಕೊಡುಗೆ ಅಪಾರ, ಇದು ಗೂಗಲ್‌ ಸೇರಿದಂತೆ ತಂತ್ರಜ್ಞಾನದಲ್ಲಿ ಅಮೆರಿಕವು ಜಾಗತಿಕ ನಾಯಕನನ್ನಾಗಿ ಬೆಳೆಸಿದೆ. ಇಂದಿನ ಘೋಷಣೆಯಿಂದ ನಿರಾಶೆಗೊಂಡಿದ್ದೇವೆ. ನಾವು ವಲಸಿಗರೊಂದಿಗೆ ನಿಲ್ಲುತ್ತೇವೆ ಮತ್ತು ಎಲ್ಲರಿಗೂ ಅವಕಾಶವನ್ನು ವಿಸ್ತರಿಸಲು ಕೆಲಸ ಮಾಡುತ್ತೇವೆ” ಎಂದು ಟ್ವೀಟ್‌ ಮಾಡಿದ್ದಾರೆ.

https://twitter.com/sundarpichai/status/1275192075214966784?s=20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights