ಭಾರತದ ಮೇಲೆ ಸೈಬರ್ ದಾಳಿಗೆ ಮುಂದಾದ ಚೀನಾ ಸೇನೆ: ಏನಿದು ಸೈಬರ್ ದಾಳಿ?
ಕೊರೊನಾ ವೈರಾಣು ದಾಳಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತೀಯರಿಗೆ ಮತ್ತೊಂದು ತಲೆ ನೋವು ಶುರುವಾಗುವ ಆತಂಕ ಎದುರಾಗಿದೆ.
ಭಾರತದ ಮೇಲೆ ಸೈಬರ್ ಅಟ್ಯಾಕ್ ನಡೆಸಲು ಚೀನಾ ಉದ್ದೇಶಿಸಿದೆ ಎಂಬ ಅಂಶವನ್ನು ಕೇಂದ್ರ ಸರಕಾರ ಬಹಿರಂಗ ಪಡಿಸಿದೆ. ಈ ಸಂಬಂಧ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವಾಲಯದ ಅಡಿಯಲ್ಲಿನ ‘ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ ‘ ನ ಡೈರಕ್ಟರೇಟ್ ಜನರಲ್ ಜನತೆಗೆ ಎಚ್ಚರದಿಂದ ಇರುವಂತೆ ತಿಳಿಸಿದೆ.
ಭಾರತೀಯರ ಇ-ಮೇಲ್ ಗಳನ್ನು ಸಾಮೂಹಿಕವಾಗಿ ಹ್ಯಾಕ್ ಮಾಡುವ ಮೂಲಕ ದತ್ತಾಂಶ ಕಳ್ಳತನಕ್ಕೆ ಚೀನಾ ಸೇನೆ ಮುಂದಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ‘ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ‘ ನ ( Computer Emergency Response Team-India ) ಹೇಳಿಕೆ ಉಲ್ಲೇಖಿಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಕೋವಿಡ್ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು, ಕೋವಿಡ್ ಉಚಿತ ಪರೀಕ್ಷೆ ಎಂಬ ವಿಷಯ ದಲ್ಲಿ ncov2019@gov.in ಎಂಬ ಇ-ಮೇಲ್ ಐಡಿಯಿಂದ ಮೇಲ್ ಬರಬಹುದು. ಆದ್ದರಿಂದ ಈ ಐಡಿಯಿಂದ ಬರುವ ಮೇಲ್ ಗಳನ್ನು ಹಾಗೂ ಅಪರಿಚಿತರ ಇ-ಮೇಲ್ ಐಡಿಗಳಿಂದ ಬರುವ ಸಂದೇಶಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದೆ.
ಸೈಬರ್ ಅಟ್ಯಾಕ್ ಮಾಡುವ ಉದ್ದೇಶದಿಂದಲೇ ಇ-ಮೇಲ್ ಗಳನ್ನು ಕಳುಹಿಸುವವರು ಇಲ್ಲಿನ ನೆಟ್ ಬಳಕೆದಾರರ ದಂತ್ತಾಶವನ್ನು ದುರುಪಯೋಗ ಮಾಡಿಕೊಳ್ಳಬಹುದು. ಅಥವಾ ಫಿಶ್ಶಿಂಗ್ ವೆಬ್ ಸೈಟ್ ಗೆ (ನಕಲಿ ವೆಬ್ ಸೈಟ್ ) ಸಂಪರ್ಕ ಕಲ್ಪಿಸಿ ಮೋಸಗೊಳಿಸಬಹುದು.
ಉದಾಹರಣೆಗೆ ಖಾತೆ ಹೊಂದಿರುವ ಬ್ಯಾಂಕ್ ನ ನಕಲಿ ವೆಬ್ ಸೈಟ್ ಸೃಷ್ಠಿಸಿ ಅದರಲ್ಲಿ ನಮ್ಮ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಅನಾಮಿಕ ವ್ಯಕ್ತಿಗಳ, ಅಪರಿಚಿತರ ಇ-ಮೇಲ್ ಗಳನ್ನು ಕ್ಲಿಕ್ ಮಾಡದೇ ಇರುವುದು ಸೂಕ್ತ ಎಂದು ಅಭಿಪ್ರಾಯ ಪಡುತ್ತಾರೆ ಎಕ್ಸಪರ್ಟ್ಸ್

