ಮಾಸ್ಕ್‌ ಹಾಕಳಿ, ಮನೆಲಿದ್ಕಳಿ, ಎರಡು ಮೀಟರ್ ಅಂತರ ಕಾಯ್ಕೊಳಿ: ಪ್ರಧಾನಿ ಮೋದಿ

ಕೊರೊನಾ ಸೋಂಕಿಗೆ ಲಸಿಕೆ ಸಂಶೋಧನೆಯಾಗುವವರೆಗೂ ನಾವೆಲ್ಲರೂ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಎರಡು ಗಜಗಳಷ್ಟು ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ್ ಅಡಿಯಲ್ಲಿ ಉತ್ತರಪ್ರದೇಶದ ವಲಸೆ ಕಾರ್ಮಿಕರಿಗೆ ಉದ್ಯೋಗ ಅಭಿಯಾನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಕೊರೋನಾ ವೈರಸ್ ಹಾವಳಿಯಿಂದಾಗಿ ಎದುರಾಗಿರುವ ಎಲ್ಲಾ ಸಂಕಷ್ಟಗಳನ್ನು ಮೀರಿ ಭಾರತ ಯಶಸ್ಸು ಗಳಿಸಲಿದೆ. ದೇಶವನ್ನು ಮತ್ತೆ ಕಟ್ಟುವ ಸಾಮೂಹಿಕ ಪ್ರಯತ್ನ ಯಶಸ್ವಿ ಕಾಣಲಿದೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಏಳು ಹಾಗೂ ಬೀಳುಗಳನ್ನು ನೋಡಿದ್ದೇವೆ. ನಮ್ಮ ಸಾಮಾಜಿಕ ಜೀವನದಲ್ಲಿ ಹಲವಾರು ಸಮಸ್ಯೆಗಳಿವೆ. ಇಂತಹ ದೊಡ್ಡ ಸಮಸ್ಯೆಯನ್ನು ಎದುರಿಸಲಿದ್ದೇವೆಂದು ಯಾರೊಬ್ಬರೂ ಚಿಂತಿಸಿರಲಿಲ್ಲ. ಸೋಂಕಿನಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೆಯೋ ತಿಳಿದಿಲ್ಲ. ವೈರಸ್’ಗೆ ಲಸಿಕೆ ಬರುವವರೆಗೂ ನಾವೆಲ್ಲರೂ ಎರಡು ಗಡಗಳಷ್ಟು ದೂರ ಇರುವುದು, ಮಾಸ್ಕ್ ಧರಿಸುವುದನ್ನು ಮುಂದುವರೆಸಲೇಬೇಕಿದೆ ಎಂದು ತಿಳಿಸಿದ್ದಾರೆ.

ಕೆಲಸದ ಶಕ್ಯಿ ಏನೆಂಬುದನ್ನು ನಿಮ್ಮೊಂದಿಗೆ ನಾನು ಅರಿತಿದ್ದೇನೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ ರೋಜರ್ ಅಭಿಯಾನ್ ಈ ಕೆಲಸದ ಶಕ್ತಿಯನ್ನೇ ಆಧರಿಸಿದೆ. ಈ ಶಕ್ತಿಯು ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜರ್ ಅಭಿಯಾನಕ್ಕೆ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶ ರಾಜ್ಯ ರೀತಿಯಲ್ಲಿಯೇ ಇತರೆ ರಾಜ್ಯಗಳೂ ಕೂಡ ಇದೇ ರೀತಿಯ ಯೋಜನೆಗಳನ್ನು ತರಲಿದೆ ಎಂಬ ವಿಶ್ವಾಸ ನನಗಿದೆ. ಈ ಕೊರೋನಾ ಬಿಕ್ಕಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಧೈರ್ಯ ಮತ್ತು ಮನೋಧರ್ಮವನ್ನು ತೋರಿದೆ. ಉತ್ತರಪ್ರದೇಶ ರಾಜ್ಯ ಸಾಕಷ್ಟು ಯಶಸ್ಸು ಸಾಧಿಸಿದ್ದು, ಕೊರೋನಾ ವಿರುದ್ಧ ಹೋರಾಡಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತವಾಗಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights