ಯುಪಿ ಲಖನೌ-ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಸ್-ಕಾರ್ ಘರ್ಷಣೆ : 6 ಮಂದಿ ಸಾವು!

ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು 18 ಮಂದಿ ಗಾಯಗೊಂಡಿದ್ದಾರೆ.

ಡಿಕ್ಕಿಯಾದ ನಂತರ ಬಸ್ ಪಲ್ಟಿಯಾಗಿದ್ದರಿಂದ ಗಾಯಾಳುಗಳನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ. ನಂತರ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದಾಗ ವಲಸೆ ಕಾರ್ಮಿಕರನ್ನು ಹೊತ್ತ ಬಸ್ ಬಿಹಾರದ ದರ್ಭಂಗದಿಂದ ದೆಹಲಿಗೆ ಹೋಗುತ್ತಿತ್ತು.

ದರ್ಬಂಗಾದಿಂದ ಬರುತ್ತಿದ್ದ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಾಗ ಎರಡೂ ವಾಹನಗಳು ಹೆದ್ದಾರಿಯಿಂದ ತಗ್ಗು ಪ್ರದೇಶಕ್ಕೆ ಉರುಳಿವೆ. ಮಾಹಿತಿ ಬಂದಾಗ ಪೊಲೀಸರು ಮತ್ತು ಇತರ ಭದ್ರತಾ ವ್ಯಕ್ತಿಗಳು ಸ್ಥಳಕ್ಕೆ ತಲುಪಿದರು. ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದು 18 ಜನರು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights