08 ಲಕ್ಷ ಅನಿವಾಸಿ ಭಾರತೀಯರಿಗೆ ಗೇಟ್‌ ಪಾಸ್‌ ನೀಡಲಿದೆ ಕುವೈಟ್‌ ಸರ್ಕಾರ; ಯಾಕೆ ಈ ನಿರ್ಧಾರ

ವಿದೇಶದಿಂದ ಬಂದಿರುವರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕುವೈಟ್ ಜಾರಿಗೊಳಿಸಲು ಉದ್ದೇಶಿಸಿರುವ ಎಕ್ಸ್ ಪಾಟ್ ಕೋಟಾ ಮಸೂದೆಯಿಂದಾಗಿ ಕನಿಷ್ಟ 8 ಲಕ್ಷ ಭಾರತೀಯರು ಆ ದೇಶ ಬಿಡುವ ಪರಿಸ್ಥಿತಿ ತಂದೊಡ್ಡಲಿದೆ ಎಂದು ವರದಿಗಳು ಹೇಳುತ್ತಿವೆ.

ಕುವೈಟ್‌ನ ರಾಷ್ಟ್ರೀಯ ಅಸೆಂಬ್ಲಿಯ ಲೀಗಲ್ ಹಾಗೂ ಲೆಜಿಸ್ಲೇಟೀವ್ ಸಮಿತಿಗೆ ಡ್ರಾಫ್ಟ್ ಎಕ್ಸ್‌ಪಾಟ್‌ ಕೋಟಾ ಬಿಲ್ ನ್ನು ಅನುಮೋದನೆಗೆ ಕಳಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಪ್ರಕಟಿಸಿದೆ.

ಈ ಕಾನೂನಿನ ಪ್ರಕಾರ,  ಕುವೈಟ್‌ನ ಒಟ್ಟು ಜನಸಂಖ್ಯೆಯ ಶೇ.15 ಕ್ಕಿಂತ ಹೆಚ್ಚು ಭಾರತೀಯರು ಇರಬಾರದು ಎಂದು ಹೇಳಲಾಗಿದೆ.  ಇದರ ಪರಿಣಾಮವಾಗಿ ಕುವೈಟ್ ನಲ್ಲಿ ಇರುವ ವಿದೇಶಿಗರ ಪೈಕಿ  1.45 ಮಿಲಿಯನ್ ಭಾರತೀಯರಿದ್ದು, ಅವರಲ್ಲಿ 8 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ. ಕುವೈಟ್‌ನ 4.3 ಮಿಲಿಯನ್ ಒಟ್ಟಾರೆ ಜನಸಂಖ್ಯೆಯ ಪೈಕಿ 3 ಮಿಲಿಯನ್ ಜನರು ವಿದೇಶಿಗರಿದ್ದಾರೆ.

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುವೈಟ್ ನ ಶಾಸಕರು ವಿದೇಶಿಗರ ಸಂಖ್ಯೆಯನ್ನು ಇಳಿಕೆ ಮಾಡಲು ಈ ಕ್ರಮ ಕೈಗೊಂಡಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯ ಕುವೈಟ್ ನ ಪ್ರಕಾರ 49,000 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights