CBSE ರದ್ದಾದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಕ್ರಮ ಪ್ರಕಟಿಸಿದ ಕೇಂದ್ರ ಸರ್ಕಾರ!

ಕೊರೊನಾ ಸೋಂಕಿನ ಭೀತಿಯಿಂದ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರವು, ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಅಂಕಗಳನ್ನು ನೀಡಿವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಕೊರೊನಾ ವೈರಸ್‌ಗೆ ಭೀತಿಯಿಂದ ಪರೀಕ್ಷೆಗಳನ್ನು ಸಧ್ಯದಲ್ಲೇ ಪುರಾರಂಭಿಸಬಾರದು, ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು  ಅರ್ಜಿಗಳು ದಾಖಲಾಗಿದ್ದ ಕಾರಣ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಅಂಕ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿಯನ್ನು ಕೋರ್ಟ್‌ ಕೇಳಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ಮಾಹಿತಿ ನೀಡಿರುವ ಸರ್ಕಾರ,  ವಿದ್ಯಾರ್ಥಿಗಳು ಮೂರಕ್ಕಿಂತಲೂ ಹೆಚ್ಚು ಪರೀಕ್ಷೆಗಳನ್ನು ಅಟೆಂಡ್​​ ಮಾಡಿರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಅವರು ಬರೆದಿರುವ ವಿಷಯಗಳಲ್ಲಿ ಗಳಿಸಿದ ಅಂಕಗಳ​ ಆಧಾರದ ಮೇರೆಗೆ ಉಳಿದ ವಿಷಯಗಳಿಗೆ ಅಂಕಗಳು ನೀಡಬಹುದು ಎಂದು ಹೇಳಿದೆ.

ಒಂದು ವೇಳೆ ವಿದ್ಯಾರ್ಥಿಗಳು ಮೂರಕ್ಕಿಂತಲೂ ಕಡಿಮೆ ಪರೀಕ್ಷೆಗೆ ಹಾಜರಾಗಿರಬಹುದು. ಆಗ ವಿದ್ಯಾರ್ಥಿಗಳು ಎಷ್ಟು ವಿಷಯಗಳ ಪರೀಕ್ಷೆ ಬರೆದಿರುತ್ತಾರೋ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಉಳಿದ ವಿಯಯಗಳಿಗೆ ಮಾರ್ಕ್ಸ್​​ ಹಂಚಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಿಬಿಎಸ್‌ಇ ವಿದ್ಯಾರ್ಥಿಗಳು ಒಂದಕ್ಕಿಂತಲೂ ಹೆಚ್ಚು ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಅವರಿಗೆ ಇವರು ಅಟೆಂಡ್​ ಮಾಡಿದ ಎಕ್ಸಾಂ ಅಥವಾ ಹಿಂದಿನ ಅಸೈನ್​​ಮೆಂಟ್​​​ ಮತ್ತು ಇಂಟರ್ನಲ್ಸ್​​​ ಮಾರ್ಕ್ಸ್​ ಆಧರಿಸಿ ಎಲ್ಲಾ ವಿಷಯಗಳಿಗೂ ಸರಾಸರಿ ಅಂಕಗಳು ನೀಡಬಹುದಾಗಿದೆ. ಬಳಿಕ ಕೊರೋನಾ ನಿಯಂತ್ರಣಕ್ಕೆ ಬಂದಮೇಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದೇ ಅದಕ್ಕೂ ಅವಕಾಶ ಮಾಡಿಕೊಡಬಹುದು ಎಂದು ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್​ಗೆ ಕೇಂದ್ರ ತಿಳಿಸಿದೆ.

ಕೇಂದ್ರದ ಸಿಬಿಎಸ್​ಇ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಸಿಬಿಎಸ್​ಇ ಮಂಡಳಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಗುರುವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಕೊರೋನಾ ಭೀತಿಯಿಂದಾಗಿ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳನ್ನ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಆರ್​ಡಿ ಸಚಿವಾಲಯ ಹಾಗೂ ಸಿಬಿಎಸ್​ಇ ಮಂಡಳಿ ತನ್ನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights