ಟ್ರಂಪ್‌ ಖಾತೆ ಬ್ಯಾನ್ ಮಾಡಿದ ಟ್ವಿಟರ್: ಹೆದರಿದ ಬಿಜೆಪಿ ನಾಯಕರು ಹೇಳಿದ್ದೇನು ನೋಡಿ!

ಅಮೆರಿಕಾದ ಡೊನಾಲ್ಡ್‌ ಟ್ರಂಪ್ ಅವರ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಟ್ವಿಟರ್‌ ಕಂಪನಿ ನಿರ್ಬಂಧಿಸಿದೆ. ಇದಕ್ಕೆ ಜಗತ್ತಿನಾದ್ಯಂತ ಬೆಂಬಲ ಮತ್ತು ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಾರತದ ಹಲವು ನಾಯಕರೂ ಸಹ ಟ್ವಿಟರ್ ಕಂಪನಿಯ ಕ್ರಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರು ಟ್ವಿಟರ್ ಕ್ರಮವನ್ನು ಖಂಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷರ ಮೇಲೆಯೇ ಇಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿರುವ ಟ್ವಿಟರ್‌, ನಮ್ಮಂತಹವರನ್ನು ಬಿಡುತ್ತದೆಯೇ ಎನ್ನುವ ಭಯ ಬಿಜೆಪಿ ನಾಯಕರಿಗೆ ಆರಂಭವಾದಂತಿದೆ. ಈ ಭಯವನ್ನು ಬಿಜೆಪಿ ನಾಯಕರು ತಮ್ಮ ಟ್ವೀಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಯಾರ ನಿಯಂತ್ರಣವೂ ಇಲ್ಲದ ಈ ದೈತ್ಯ ತಂತ್ರಜ್ಞಾನ ಕಂಪನಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಇರುವ ಅಪಾಯವನ್ನು ಇನ್ನೂ ಅರ್ಥಮಾಡಿಕೊಳ್ಳದವರಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅವರು ಅಮೆರಿಕ ಅಧ್ಯಕ್ಷರಿಗೆ ಈ ರೀತಿ ಮಾಡಿದ್ದಾರೆ ಎಂದರೆ, ಇದನ್ನು ಯಾರಿಗಾದರೂ ಮಾಡಬಹುದು. ಭಾರತವು ನಮ್ಮ ಪ್ರಜಾಪ್ರಭುತ್ವದ ಒಳಿತಿಗಾಗಿ ಈ ಶೀಘ್ರದಲ್ಲೇ ಮಧ್ಯವರ್ತಿಗಳ ನಿಯಮಗಳನ್ನು ಪರಿಶೀಲಿಸಲಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಫಲಿತಾಂಶದ ನಂತರ ಮತ ಚಲಾಯಿಸಿ ಎಂದ ಟ್ರಂಪ್‌ ಪುತ್ರ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌

ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಉಸ್ತುವಾರಿ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿ, “ಪ್ರಸ್ತುತ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ನಿರ್ಬಂಧಿಸಿರುವುದು ಅಪಾಯಕಾರಿಯಾಗಿದ್ದು, ಇದು ಒಂದು ಪೂರ್ವ ನಿದರ್ಶನವಾಗಿದೆ. ವಿಪರ್ಯಾಸವೆಂದರೆ ವಾಕ್‌ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಇದನ್ನು ಸಂಭ್ರಮಿಸುತ್ತಿದ್ದಾರೆ. ದೈತ್ಯ ತಂತ್ರಜ್ಞಾನ ಕಂಪನಿಗಳು ಈಗ ಓಲಿಗಾರ್ಚ್‌ಗಾಳಗಿವೆ (ಮಿತಜನ ಕೇಂದ್ರಿತ)” ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಎನ್ನುವ ಪತ್ರಿಕೆಯೊಂದು ಭಾರತದಲ್ಲಿನ ಫೇಸ್‌ಬುಕ್‌ ಅಲ್ಲಿನ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದೆ ಎನ್ನುವ ವರದಿಯೊಂದನ್ನು ಬಿಡುಗಡೆ ಮಾಡಿತ್ತು. 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಬೇಕಾಗುವ ಎಲ್ಲಾ ತಂತ್ರಗಳನ್ನು ಫೇಸ್‌ಬುಕ್‌ ಅನಧಿಕೃತವಾಗಿ ಮಾಡಿತ್ತು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಲಾಗಿತ್ತು.

ಬಿಜೆಪಿಯವರ ದ್ವೇಷ ಭಾಷಣಗಳನ್ನು ನಿರ್ಬಂಧಿಸುವಲ್ಲಿ ಫೇಸ್‌ಬುಕ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಅಮೆರಿಕದ ಪತ್ರಿಕೆ ವರದಿ ಮಾಡಿದ ನಂತರ ಭಾರತದಲ್ಲಿ ಇದಕ್ಕೆ ಸಂಬಂಧಪಟ್ಟ ಚರ್ಚೆಗಳು ತೀವ್ರವಾಗಿ ನಡೆದಿದ್ದವು. ಇದರ ಭಾಗವಾಗಿ ಫೇಸ್‌ಬುಕ್‌ ಇಂಡಿಯಾದ ಮುಖ್ಯಸ್ಥೆ ಆಂಖಿದಾಸ್‌ ಕೂಡ ಇತ್ತೀಚೆಗೆ ರಾಜೀನಾಮೆ ನೀಡಿದ್ದರು.

ಇಷ್ಟೇ ಅಲ್ಲದೇ ಭಾರತದಲ್ಲಿನ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿಯು ತನಗೆ ಬೇಕಾದಂತೆ ಕಾನೂನುಭಾಹಿರವಾಗಿ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪವಿದೆ.

ಇದಕ್ಕೆ ಪುಷ್ಟಿ ನೀಡುವ ಹತ್ತಾರು ಅಂಶಗಳನ್ನು ಕೇಂದ್ರ ಸರ್ಕಾರದ ನೀತಿಗಳು ಬಹಿರಂಗಪಡಿಸಿವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌‌ನಲ್ಲಿ ಮನವಿ ಸಲ್ಲಿಸಿತ್ತು. ಇದರ ಭಾಗವಾಗಿ ವಾಟ್ಸಾಪ್‌ ಅನ್ನು ಫೇಸ್‌ಬುಕ್‌ಗೆ ಲಿಂಕ್‌ ಮಾಡುವಂತೆ ಹೊಸ ಅಪ್ಡೇಟ್‌ ವರ್ಶನ್‌ ಬಂದಿದೆ. ಈ ಮೂಲಕ ಬಿಜೆಪಿಗೆ ವಿರುದ್ಧವಾಗಿ ಹೊರಡುವ ಸಂದೇಶಗಳನ್ನು ಕೇಂದ್ರ ಸರ್ಕಾರವು ಕದ್ದಾಲಿಕೆ ಮಾಡುವುದರರೊಂದಿಗೆ ನಿಯಂತ್ರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂಸಾಚಾರ: ಟ್ರಂಪ್‌-ಬೈಡನ್‌ ಬೆಂಬಲಿಗರ ನಡುವೆ ಮಾರಾಮಾರಿ!

ಇಂತಹುದೇ ಕ್ರಮವನ್ನು ಫೇಸ್‌ಬುಕ್‌ ಇಂಡಿಯಾ ಈ ಹಿಂದೆ ತೆಗೆದುಕೊಂಡಿತ್ತು. ಬಿಜೆಪಿಗೆ ವಿರುದ್ಧವಾಗಿ ವ್ಯವಹರಿಸುವ ಎಲ್ಲಾ ಪೇಜ್‌ಗಳನ್ನು ನಿರ್ಬಂಧಿಸಿತ್ತು. ಭಾರತದ ಟ್ವಿಟರ್‌ ಕೂಡ ಇದರಿಂದ ಹೊರತಾಗಿಲ್ಲ. ಹಾಗಾಗಿ ಫೇಸ್‌ಬುಕ್‌ ಮತ್ತು ಟ್ವಿಟರ್‌ ಕಂಪನಿಗಳು ಭಾರತದಲ್ಲಿ ಬಿಜೆಪಿಯ ಪರವಾಗಿವೆ. ಆದರೆ ಅದು ಜಾಗತಿಕ ಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ಒತ್ತಡ ಬರುತ್ತಿದೆ.

ಇದರಿಂದ ಭಯಬಿದ್ದ ಭಾರತೀಯ ಬಿಜೆಪಿ ನಾಯಕರು ಮತ್ತು ಇನ್ನಿತರರು ತಮಗೂ ಇದೇ ಗತಿ ಬರಬಹುದು ಎಂದು ಊಹಿಸಿ, ʼತಮ್ಮ ದೊಡ್ಡಣ್ಣʼನಿಗಾದ ಗತಿಯನ್ನು ಖಂಡಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ವೈಯಕ್ತಿಕ ಖಾತೆಯನ್ನು (realDonaldTrump) ಟ್ವಿಟರ್ ಶಾಶ್ವತವಾಗಿ ಬ್ಯಾನ್ ಮಾಡಿದ್ದು, ಅಮೆರಿಕ ಕ್ಯಾಪಿಟಲ್ ಮೇಲಿನ ಮತ್ತೊಂದು ದಾಳಿಯನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಟ್ವಿಟರ್ ಹೇಳಿದೆ.

ಇದರಿಂದ ಕೆರಳಿದ ಟ್ರಂಪ್ ‘ಟ್ವಿಟರ್ ನನ್ನ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ’ ಎಂದು ತನ್ನ ಕಾರ್ಯಕ್ರಮಗಳ ಮತ್ತು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದ್ದ ಟೀಮ್ ಟ್ರಂಪ್ ಖಾತೆಯಿಂದ ಟ್ವೀಟ್ ಮಾಡಿದ್ದರು. ಕೂಡಲೇ ಆ ಖಾತೆಯನ್ನೂ ಸಹ ಟ್ವಿಟರ್ ಅಮಾನತು ಮಾಡಿದೆ.

ಇದನ್ನೂ ಓದಿ: ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಟ್ರಂಪ್‌: ಅಮೆರಿಕನ್ನರ ಅಭಿಪ್ರಾಯ!

ನಾವು ಟ್ರಂಪ್‌ ಟ್ವೀಟ್‌ಗಳನ್ನು ಹತ್ತಿರದಿಂದ ಅವಲೋಕಿಸಿದ್ದೇವೆ. ಮುಂದಿನ ಹಿಂಸಾತ್ಮಕ ಅಪಾಯಗಳನ್ನು ತಡೆಯಲು ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡುತ್ತಿದ್ದೇವೆ ಎಂದು ಟ್ವಿಟರ್ ತಿಳಿಸಿದೆ.

ಟ್ರಂಪ್‌ ಆಡಳಿತವಧಿಯಲ್ಲಿ ತನ್ನ ವೈಯಕ್ತಿಕ ಖಾತೆಯ ಮೂಲಕ ಆಧಾರವಿಲ್ಲದ ಆರೋಪಗಳು, ಸುಳ್ಳು ಘೋಷಣೆಗಳು, ತಪ್ಪು ಮಾಹಿತಿಗಳನ್ನು ಹರಡಿದ್ದಾರೆ ಎಂದು ಟ್ವಿಟರ್ ಆರೋಪಿಸಿದೆ.

ಟ್ರಂಪ್ ಅಧಿಕಾರವಧಿ ಮುಗಿಯುತ್ತಿದ್ದು, ಬುಧವಾರ ನಡೆದ ಯುಸ್ ಸಂಸತ್ ಮೇಲಿನ ದಾಳಿಗೆ ಟ್ರಂಪ್‌ ಅನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಇದೇ ಸಮಯಕ್ಕೆ ಕಾಯುತ್ತಿದ್ದ ಟ್ವಿಟರ್ ಟ್ರಂಪ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಎಚ್ಚರಿಕೆ ರವಾನಿಸಿದೆ.

ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶದ ಅಧ್ಯಕ್ಷರಾಗಿ ಟ್ರಂಪ್ ನಡೆದುಕೊಂಡಿದ್ದು, ಗಲಭೆಗೆ ಪ್ರಚೋದನೆ ನೀಡಿದ್ದು, ಅದರಿಂದಾಗಿ ಅವರ ಟ್ವಿಟರ್ ಖಾತೆ ಖಾಯಂ ಬ್ಯಾನ್‌ ಆಗಿದ್ದು ಎಲ್ಲವೂ ಅವರಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ.

ತದನಂತರ ಟ್ರಂಪ್ ಅಧ್ಯಕ್ಷರ ಅಧಿಕೃತ ಖಾತೆ @POTUS ಮೂಲಕ ಟ್ವಿಟರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತೀವ್ರ ಎಡಪಂಥೀಯರ ಜೊತೆ ಸೇರಿ ಟ್ವಿಟರ್ ನನ್ನ ಮೇಲೆ ಪಿತೂರಿ ನಡೆಸುತ್ತಿದೆ ಎಂದು ದೂರಿದ್ದಾರೆ. ಆ ಟ್ವೀಟ್ ಅನ್ನು ಸಹ ಟ್ವಿಟರ್ ಡಿಲೀಟ್ ಮಾಡಿದೆ.

ಮತ್ತೊಂದು ಖಾತೆಯನ್ನು ಬಳಸಿ ಟ್ವಿಟರ್ ಅನ್ನು ಹಣಿಯಲು ಮುಂದಾಗುವುದು ನಮ್ಮ ನಿಯಮಗಳ ಉಲ್ಲಂಘಟನೆ ಎಂದು ಟ್ವಿಟರ್ ತಿಳಿಸಿದೆ.

ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆದಾಗ ತಾತ್ಕಾಲಿಕವಾಗಿ ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಅದಕ್ಕೂ ಮೊದಲು ಟ್ರಂಪ್ “ನಾನು ಜನವರಿ 20ರ ಜೋ ಬೈಡೆನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ, ನನ್ನ ಅಭಿಮಾನಿಗಳು ನನ್ನ ಮಾತು ಮೀರುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಸೋತಿದ್ದೇನೆ ಎಂದು ಒಪ್ಪಿಕೊಂಡ ಟ್ರಂಪ್‌; ಅಧಿಕಾರ ಹಸ್ತಾಂತರಕ್ಕೆ ನಿರ್ಧಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights