ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಟ್ರಂಪ್‌: ಅಮೆರಿಕನ್ನರ ಅಭಿಪ್ರಾಯ!

ಅಮೆರಿಕಾದಲ್ಲಿ ಟ್ರಂಪ್‌ ಅವರ ಅಧ್ಯಕ್ಷತೆಯ ಬಗ್ಗೆ ನಡೆಸಲಾಗದ ಸಮೀಕ್ಷೆಯಲ್ಲಿ ಶೇ. 42 ರಷ್ಟು ಜನರು ಟ್ರಂಪ್‌ ಅಮೆರಿಕಾದ ಇತಿಹಾಸದಲ್ಲಿ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಹೇಳಿದ್ದಾರೆ. ಅಲ್ಲದೆ, ಶೇ.08 ರಷ್ಟು ಜನರು ಟ್ರಂಪ್‌ ಅಡಳಿತ ಸಾಧಾರಣ ಎಂದೂ, ಶೇ 16ರಷ್ಟು ಜನರು ಟ್ರಂಪ್ ಸರಾಸರಿಗಿಂತಲೂ ಉತ್ತಮ ಮತ್ತು ಶೇ 22ರಷ್ಟು ಜನರು ಅಮೆರಿಕ ಕಂಡ ಮಹಾನ್ ಅಧ್ಯಕ್ಷರಲ್ಲಿ ಒಬ್ಬರು ಎಂದು ಅಭಿಪ್ರಾಯ ಪಟ್ಟಿರುವುದಾಗಿ ಹೇಳಿದ್ದಾರೆ ಎಂದು ಫಾಕ್ಸ್ ನ್ಯೂಸ್ ಹೇಳಿದೆ.

ಟ್ರಂಪ್ ಅವರ ಆಡಳಿತಾವಧಿ ಮುಗಿದಿದ್ದು, ಇತಿಹಾಸಕಾರರು, ಅಮೆರಿಕನ್ನರು ಟ್ರಂಪ್ ಅವರ ಅಧ್ಯಕ್ಷಗಿರಿಯನ್ನು ಐತಿಹಾಸಿಕ ದೃಷ್ಟಿಕೋನದಿಂದ ವಿಶ್ಲೇಷಿಸಲು ಆರಂಭಿಸಿದ್ದಾರೆ.

ಕೆಲವು ವರ್ಷಗಳ ಬಳಿಕ ಟ್ರಂಪ್ ಅವರನ್ನು ಅಮೆರಿಕನ್ನರು ಹೇಗೆ ನೆನಪಿಸಿಕೊಳ್ಳಬಹುದು ಎಂದು ಫಾಕ್ಸ್‌ನ್ಯೂಸ್‌ ಸಮೀಕ್ಷೆ ನಡೆಸಿದ್ದು,  ಇತಿಹಾಸಕಾರರು ಮತ್ತು ಅನೇಕ ಮತದಾರರು ಟ್ರಂಪ್ ಅವರನ್ನು ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ನೆನಪಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಉತ್ತಮ ಆಡಳಿತಗಾರರಲ್ಲಿ ಒಬ್ಬರು ಎಂದು ಅವರನ್ನು ಗುರುತಿಸಿರುವವರ ಸಂಖ್ಯೆ ತೀರಾ ಕಡಿಮೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂಸಾಚಾರ: ಟ್ರಂಪ್‌-ಬೈಡನ್‌ ಬೆಂಬಲಿಗರ ನಡುವೆ ಮಾರಾಮಾರಿ!

ಅಮೆರಿಕಾದ ಆಡಳಿತ ಇತಿಹಾಸದಲ್ಲಿ ಗೆರಾಲ್ಡ್ ಫೋರ್ಡ್ ಅವರಿಂದ ಆರಂಭಿಸಿ ಇದುವರೆಗೂ ಆಡಳಿತ ನಡೆಸಿದ ಅಧ್ಯಕ್ಷರನ್ನು ಇತಿಹಾಸ ಹೇಗೆ ನೋಡುತ್ತದೆ ಎಂಬ ಸಮೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ ಟ್ರಂಪ್ ಅವರು ಪಡೆದಿರುವಷ್ಟು ನಕಾರಾತ್ಮಕ ಮತಗಳನ್ನು ಯಾರೂ ಪಡೆದಿಲ್ಲ.

ಬರಾಕ್ ಒಬಾಮ ಅವರನ್ನು ಕೆಟ್ಟ ಆಡಳಿತಗಾರರಲ್ಲಿ ಒಬ್ಬರು ಎಂದು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಮಾರಿಸ್ಟ್ ಕಾಲೇಜ್ ಸಮೀಕ್ಷೆಯಲ್ಲಿ ಶೇ 17ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು.


ಇದನ್ನೂ ಓದಿ: ಸೋಲೊಪ್ಪಿಕೊಂಡ ಟ್ರಂಪ್‌; ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights