ನಿಮ್ಮ ಕನಸು ನನಸಾಗುವುದಿಲ್ಲ, ನಾನು ಧಣಿದಿದ್ದೇನೆ ಕ್ಷಮಿಸಿ: ಪತ್ರ ಬರೆದು ಯುವತಿ ಆತ್ಮಹತ್ಯೆ
ಭಾನುವಾರ (ಸೆ.13)ದಂದು ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಯಲಿದ್ದು, ಪರೀಕ್ಷೆಗೆ ಭಯಗೊಂಡಿರುವ ಯುವತಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ಮಧುರೈನಲ್ಲಿ ನಡೆದಿದೆ.
ಮಧುರೈನ 19 ವರ್ಷದ ಜ್ಯೋತಿಶ್ರೀ ದುರ್ಗಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನನ್ನು ಕ್ಷಮಿಸು. ನಾನು ದಣಿದಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾಳೆ.
ತಾಯಿ, ಸಹೋದರನೊಂದಿಗೆ ಮದುರೈನಲ್ಲಿರುವ ಸೇನೆಯ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ಜ್ಯೋತಿಶ್ರೀ, ಕಳೆದ ವರ್ಷವೂ ನೀಟ್ ಪರೀಕ್ಷೆ ಬರೆದಿದ್ದರು. ಆದರೆ, ಕೆಲವೇ ಕೆಲವು ಅಂಕಗಳಿಂದ ವೈದ್ಯಕೀಯ ಸೀಟು ಪಡೆಯುವುದರಲ್ಲಿ ವಿಫಲವಾಗಿದ್ದರು. ಅಂದಿನಿಂದ ಒಂದು ವರ್ಷಗಳ ಕಾಲ ಪರೀಕ್ಷೆಗೆ ತಯಾರಿ ನಡೆಸಿದ್ದ ಜ್ಯೋತಿಶ್ರೀ, ಈ ಬಾರಿ ನೀಟ್ ಪರೀಕ್ಷೆ ಕಟ್ಟಿದ್ದರು. ಆದರೆ, ಪರೀಕ್ಷೆ ಬಗ್ಗೆ ಭಯಗೊಂಡು ಪರೀಕ್ಷೆಗೆ ಒಂದು ದಿನ ಬಾಕಿ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ, ನನ್ನ ಸಾವಿಗೆ ಯಾರು ಕಾರಣರಲ್ಲ. ಪರೀಕ್ಷೆಯ ಬಗೆಗೆ ಭಯಗೊಂಡಿದ್ದೇನೆ. ನನಗೆ ಮೆಡಿಕಲ್ ಸೀಟ್ ಸಿಗುವುದಿಲ್ಲ. ನಿಮ್ಮ ಕನಸನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಅತಂಕ ಹೆಚ್ಚಾಗಿದೆ. ತನಗೆ ದಣಿವಾಗಿದೆ ನನ್ನನ್ನ ಕ್ಷಮಿಸಿ. ನಿಮ್ಮ ಪರಿಶ್ರಮವೆಲ್ಲ ವ್ಯರ್ಥವಾಗಲಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ; ಪರೀಕ್ಷೆಗೆ ಅಡ್ಡಿಯಿಲ್ಲ: ಸುಪ್ರೀಂ ಕೋರ್ಟ್