ಇಂದಿನಿಂದ ಸಂಡೇ ಲಾಕ್‌ಡೌನ್; ರಾಜ್ಯದಲ್ಲಿ ಏನು ಲಭ್ಯ? ಯಾವುದು ಲಭ್ಯವಿಲ್ಲ!

ಕರ್ನಾಟಕದಲ್ಲಿ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗುತ್ತಲೇ ಇದ್ದು, ರಾಜ್ಯ ಸರ್ಕಾರ ವೈರಸ್‌ ನಿಯಂತ್ರಣಕ್ಕೆ ಎಣಗಾಡುತ್ತಿದೆ. ದೇಶಾದ್ಯಂತ ಲಾಕ್‌ಡೌನ್‌ ವಿಫಲವಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಿರುವ ಸಂದರ್ಭದಲ್ಲಿ ರಾಜ್ಯಸರ್ಕಾರ ವಾರದಲ್ಲಿ ಒಂದು ದಿನದ ಲಾಕ್‌ಡೌನ್‌ ಮಾಡಲು ಮುಂದಾಗಿದೆ. ಸರ್ಕಾರಿ ರಜೆ ಇರುವ ಭಾನುವಾರ ರಾಜ್ಯಾದ್ಯಂತ ಲಾಕ್‌ಡೌನ್‌ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಂದಿನಿಂದ ಸಂಡೇ ಲಾಕ್‌ಡೌನ್‌ ಜಾರಿಯಾಗಲಿದೆ. ಅದರಂತೆಯೇ ಇಂದು ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

ಇದಲ್ಲದೆ,  ಪ್ರತೀದಿನ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇದೆ. ಈಗ ಒಂದು ಗಂಟೆ ಮುಂಚಿತವಾಗಿ, ಅಂದರೆ ರಾತ್ರಿ 8 ಗಂಟೆಗೇ ಕರ್ಫ್ಯೂ ಶುರುವಾಗಲಿದೆ. ಸರ್ಕಾರ ಈ ಆದೇಶವನ್ನು ಈಗಾಗಲೇ ಜಾರಿಗೊಳಿಸಿದೆ. ಜತೆಗೆ ಭಾನುವಾರ ಸಂಪೂರ್ಣ ಲಾಕ್​ಡೌನ್​​ ಜಾರಿ ಮಾಡಲಾಗಿದೆ. ಹೀಗಾಗಿ, ಭಾನುವಾರ ಏನಿರುತ್ತೆ? ಏನು ಇರಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಏನು ಇರುತ್ತೆ ಏನು ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಏನಿರುತ್ತೆ?

  • ಹಣ್ಣು ತರಕಾರಿ ,ಮೊಟ್ಟೆ ಮಾಂಸ,ದಿನಸಿ ಪದಾರ್ಥ ಅಂಗಡಿ
  • ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ
  • ಮಾಧ್ಯಮ
  • ಡಾಕ್ಟರ್ಸ್, ನರ್ಸ್​​, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ
  • ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
  • ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ

ಏನಿರಲ್ಲ?

  • ಸಾರ್ವಜನಿಕರ ಸಂಚಾರ ನಿರ್ಬಂಧ
  • ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್
  • ನಗರದ ಎಲ್ಲಾ ಪ್ರಮುಖ ರಸ್ತೆ ಕ್ಲೋಸ್
  • ಬಾರ್, ಸೆಲ್ಯೂನ್, ಪ್ಯಾನ್ಸಿ ಸ್ಟೋರ್ ಬಂದ್
  • ಎಲ್ಲಾ ಗಾರ್ಮೆಂಟ್ಸ್ ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಕ್ಲೋಸ್
  • ಎಲ್ಲಾ ಪಾರ್ಕ್​ಗಳಿಗೂ ಬೀಗ. ಜಾಗಿಂಗ್,ವಾಕಿಂಗ್​ಗೆ ಇಲ್ಲ ಅವಕಾಸ
  • ಆಟೋ ಟ್ಯಾಕ್ಸಿ ,ಕ್ಯಾಬ್ ಸೇವೆ ಬಂದ್
  • ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights