ಕೊರೊನಾ ಕಂಟಕ : ರಾಜ್ಯದಲ್ಲಿಂದು ಹೊಸದಾಗಿ 26 ಕೇಸ್ : ಸೋಂಕಿತರ ಸಂಖ್ಯೆ 951ಕ್ಕೇರಿಕೆ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ  ಹೆಚ್ಚಾಗುತ್ತಲೇ ಇದೆ. ಇಂದು ಮದ್ಯಾಹ್ನದ ವೇಳೆ ಮತ್ತೆ ಹೊಸದಾಗಿ 26 ಕೇಸ್ ಪತ್ತೆಯಾಗಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ಹೌದು… ಇಂದು ಮದ್ಯಾಹ್ನದ ಹೆಲ್ತ್ ಬುಲಿಟಿನ್ ಪ್ರಕಾರ, ರಾಜ್ಯದಲ್ಲಿ ಹೊಸದಾಗಿ 26 ಕೊರೊನಾ ಪ್ರಕರಣಗಳಲ್ಲಿ ಬೀದರ್ 11, ಹಾಸನ 4, ದಾವಣಗೆರೆ, ವಿಜಯಪುರ, ಕಲಬುರಗಿ, ಉತ್ತರ ಕನ್ನಡದ ತಲಾ ಇಬ್ಬರಿಗೆ, ದಕ್ಷಿಣ ಕನ್ನಡ, ಬಳ್ಳಾರಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ 7 ಜನರು ಹೊರ ರಾಜ್ಯದಿಂದ ಬಂದಿರುವವರಾಗಿದ್ದಾರೆ. ಇತ್ತ ರೋಗಿ-928 ಬೆಂಗಳೂರಿನ 37 ವರ್ಷದ ನರ್ಸ್ ಆಗಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ 951 ಸೋಂಕಿತರ ಪೈಕಿ 32 ಜನ ಕೊರೊನಾದಿಂದ ಸಾವನ್ನಪ್ಪಿದ್ದು, 442 ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಕಲಬುರಗಿಯಲ್ಲಿ ಓರ್ವ ಕೊರೊನಾಗೆ ಬಲಿಯಾಗಿದ್ದಾನೆ.ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಅವರ ಕೋವಿಡ್-19 ರಿಪೋರ್ಟ್ ಪಾಸಿಟಿವ್ ಬಂದಿದೆ. ಈ ಮೂಲಕ ಕಲಬುರಗಿಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ.

ಹೊಸದಾಗಿ ದಾಖಲಾದ 26 ಸೋಂಕಿತರಲ್ಲಿ 3 ಜನ ಪುರುಷರಿದ್ದು, ಓರ್ವ ವೃದ್ಧ, 8 ಜನ ಮಹಿಳೆಯರು, ಇಬ್ಬರು ಬಾಲಕರು ಮತ್ತು 5 ಜನ ಬಾಲಕಿ, ಯುವಕರ4 ಜನ ಯುವತಿಯರು 3 ಜನ ಇದ್ದಾರೆ. ಅತೀ ಹೆಚ್ಚು ಮಹಿಳೆಯರೇ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಕ್ಕಳಿಗೂ ಸೋಂಕು ಅಧಿಕ ಸಂಖ್ಯೆಯಲ್ಲಿ ಹರಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights