ದೇಶವನ್ನು ಲಾಕ್‌ಡೌನ್ ಮಾಡುವಂತೆ ವರ್ತಿಸಬೇಡಿ; ದೇಶವನ್ನುದ್ದೇಶಿಸಿ ಮೋದಿ ಮಾತುಗಳ ಮುಖ್ಯಾಂಶಗಳು!‌

ದೇಶದ ಜನರನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಮಂಗಳವಾರ ರಾತ್ರಿ ಮಾತನಾಡಿದ್ದಾರೆ. ಕೊರೊನಾ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಹೆಚ್ಚಾಗಿ ಹೊರಬಬೇಡಿ, ಕೊರೊನಾಗೆ ಲಾಕ್‌ಡೌನ್‌ ಒಂದೇ ಅಸ್ತ್ರವಲ್ಲ. ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಮಾಡವಂತೆ ಪರಿಸ್ತಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ ಎಂದು ದೇಶದ ಜನರಿಗೆ ಎಚ್ಚರಿಕೆ ಕರೆ ಕೊಟ್ಟಿದ್ದರೆ.

ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ವಿವಿಧ ರೀತಿಯಲ್ಲಿ ಪ್ರಯತ್ನಿಸಬೇಕು. ಹಲವು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಸೋಂಕು ಹರಡುವಿಕೆಯನ್ನು ತಡೆಯಬೇಕು. ಲಾಕ್‌ಡೌನ್‌ಅನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು ಎಂದು ಮೋದಿಯವರು ತಿಳಿಸಿದ್ದಾರೆ.

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನ ಆಕ್ರಮಣ ತೀವ್ರಗತಿಯಲ್ಲಿರುವುದರಿಂದಾಗಿ ಮೋದಿಯವರ ಭಾಷಣದಲ್ಲಿ ಏನಿರಲಿದೆ ಎಂದುದೇಶದ ಜನರ ಚಿತ್ರ ಮೋದಿಯವರತ್ತ ನೆಟ್ಟಿತ್ತು.

ಪ್ರಧಾನಿ ಮೋದಿಯ ಮಾತಿನ ಮುಖ್ಯಾಂಶಗಳು ಹೀಗೆವೆ:

* ಕೊರೊನಾದಿಂದ ಮೃತರ ಕುಟುಂಬಗಳ ದುಃಖದಲ್ಲಿ ಆ ಕುಟುಂಬದಲ್ಲಿ ನಾನೂ ಒಬ್ಬ ಸದಸ್ಯನಾಗಿ ಭಾಗಿಯಾಗ್ತೇನೆ.
* ಈ ಹಿಂದೆ ನಾವು ಹಲವು ಸಮಸ್ಯೆಗಳನ್ನ ಎದುರಿಸಿದ್ದೇವೆ. ಸಧ್ಯ ಆಕ್ಸಿಜನ್‌ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ.
* ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಲಾಗ್ತಿದೆ.
* ಜನವರಿ, ಫೆಬ್ರವರಿಯಲ್ಲಿ ಲಸಿಕೆ ಉತ್ಫಾದನೆ ಹೆಚ್ಚಳ
* ದೇಶದಲ್ಲಿ ವ್ಯಾಕ್ಸಿನ್‌ ಉತ್ಫಾದನೆ ಹೆಚ್ಚಿಸಲಾಗ್ತಿದೆ.

* ಲಸಿಕೆ ಹೆಚ್ಚಳಕ್ಕೆ ಎಲ್ಲ ಫಾರ್ಮಸಿಗಳ ಜೊತೆ ಚರ್ಚೆ ಮಾಡಲಾಗಿದೆ.
* ಆಕ್ಸಿಜನ್‌ ಉತ್ಪಾದನೆ, ಸರಬರಾಜುಗೆ ಹೆಚ್ಚಿನ ಒತ್ತು ನೀಡುತ್ತೇವೆ.

* ಕೊನೆಯ ಆಸ್ತ್ರ ಲಾಕ್‌ ಡೌನ್‌, ಅದಕ್ಕೆ ಆಸ್ಪದ ಕೊಡ್ವೇಡಿ
* ರಾಜ್ಯಗಳು ಲಾಕ್‌ ಡೌನ್‌ʼನ್ನ ಅಂತಿಮ ಆಸ್ತ್ರವಾಗಿ ಬಳಸಿ
* ದೇಶವನ್ನ ಲಾಕ್‌ ಡೌನ್‌ʼನಿಂದ ಬಜಾವ್‌ ಮಾಡ್ಬೇಕು
* ಆನಗತ್ಯವಾಗಿ ಮನೆಯಿಂದ ಹೊರ ಹೋಗಬೇಡಿ.
* ಕೊರೊನಾ ಸೋಂಕು ಬೆನ್ನೆಲ್ಲೆ ಲಸಿಕೆ ಕಂಡು ಹಿಡಿಯಲಾಗಿದೆ.
* ವಿಜ್ಞಾನಿಗಳು ಕಡಿಮೆ ಸಮಯದಲ್ಲಿ ಲಸಿಕೆ ಕಂಡು ಹಿಡಿದಿದ್ದಾರೆ
* ಭಾರತದಲ್ಲಿ ಅತೀ ಕಡಿಮೆ ದರದಲ್ಲಿ ಲಸಿಕೆ ಲಭ್ಯ
* ದೇಶದ್ಯಾಂತ ಎರಡು ಲಸಿಕೆಗಳನ್ನ ಉಪಯೋಗಿಸಲಾಗ್ತಿದೆ
* ವಿಶ್ವದಲ್ಲೇ ವೇಗವಾಗಿ ನಮ್ಮ ದೇಶದಲ್ಲಿ ಲಸಿಕೆ ನೀಡ್ತಿದ್ದೇವೆ
* ಮೇ.1ರಿಂದ 18 ವರ್ಷ ಮೇಲ್ಪಟ್ಟವ್ರಿಗೆ ಲಸಿಕೆ ನೀಡ್ತೇವೆ
* ಲಸಿಕೆಯನ್ನ ಪ್ರತಿಯೊಬ್ಬರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗ್ತಿದೆ
* ಲಸಿಕೆ ಹೆಚ್ಚಳದ ಜೊತೆಗೆ ಆಸ್ಪತ್ರೆಯಲ್ಲಿ ಬೆಡ್‌ ಹೆಚ್ಚದ ಬಗ್ಗೆ ಕ್ರಮ
* ಯಾವುದೇ ಕಾರಣಕ್ಕೂ ಎದೆಗುಂದಬೇಡಿ.
* ಲಸಿಕೆ ಆಭಿಯಾನದಡಿ ವೇಗವಾಗಿ ಲಸಿಕೆ ನೀಡಲಾಗುತ್ತೆ
* ಈಗಾಗಲೇ ಹಿರಿಯ ನಾಗಾರಿಕರಿಗೆ ಲಸಿಕೆ ನೀಡಲಾಗಿದೆ
* ನಮ್ಮಲ್ಲೀಗ ಅತ್ಯಧುನಿಕ ಪಿಪಿಇ ಕಿಟ್‌, ಲ್ಯಾಬ್‌ʼಗಳು ಲಭ್ಯ
* ಯುವ ಜನ ಸಣ್ಣ ಸಣ್ಣ ತಂಡಗಳನ್ನ ರಚಿಸಿ, ಜಾಗೃತಿ ಮೂಡಿಸುವ ಕೆಲ್ಸ ಮಾಡಿ.
* ಜನರ ಜೀವ ಉಳಿಸುವುದೊಂದೇ ನಮ್ಮ ಉದ್ದೇಶ
* ಯಾವುದೇ ಕಾರಣಕ್ಕೂ ಗುಳೆ ಹೋಗ್ಬೇಡಿ
* ಕೊರೊನಾ ನಿಯಮಗಳನ್ನ ಪಾಲಿಸಿ, ಪರಿಹಾರವನ್ನ ಸ್ವಸ್ಥ್ಯವಾಗಿಡಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights