ದೇಶದಲ್ಲಿ ಒಂದೇ ದಿನ 38,902 ಕೊರೊನಾ ಕೇಸ್ : 543 ಸೋಂಕಿತರು ಬಲಿ..!
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 38,902 ಕೊರೊನಾ ಪ್ರಕರಣಗಳು ದಾಖಲಾಗಿದ್ದು 543 ಸಂಭವಿಸಿದೆ. ಈ ಮೂಲಕ ಭಾರತದಲ್ಲಿ 11 ಲಕ್ಷಕ್ಕೆ ತಲುಪಿದೆ.
ಭಾರತವು ಭಾನುವಾರ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 38,902 ಹೊಸ ರೋಗಿಗಳು ಮತ್ತು 543 ಸಾವುಗಳು ದಾಖಲಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟು 10,77,618 ಕೋವಿಡ್-19 ಪ್ರಕರಣಗಳಲ್ಲಿ 3,73,379 ಸಕ್ರಿಯ ಪ್ರಕರಣಗಳು ಇದ್ದು, ಇವರಲ್ಲಿ 6,77,423 ಸೋಂಕಿತರು ಗುಣಮುಖರಾಗಿದ್ದು, 26,816 ಸಾವುಗಳು ದಾಖಲಾಗಿವೆ.
1,37,91,869 ಮಾದರಿಗಳನ್ನು ಜುಲೈ 18 ರವರೆಗೆ ಪರೀಕ್ಷಿಸಲಾಗಿದ್ದು, ಅದರಲ್ಲಿ 3,58,127 ಪರೀಕ್ಷೆಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

