ದೇಶದಲ್ಲಿ ಒಂದೇ ದಿನ 38,902 ಕೊರೊನಾ ಕೇಸ್ : 543 ಸೋಂಕಿತರು ಬಲಿ..!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ  ಬರೋಬ್ಬರಿ 38,902 ಕೊರೊನಾ ಪ್ರಕರಣಗಳು ದಾಖಲಾಗಿದ್ದು 543 ಸಂಭವಿಸಿದೆ. ಈ ಮೂಲಕ ಭಾರತದಲ್ಲಿ 11 ಲಕ್ಷಕ್ಕೆ ತಲುಪಿದೆ.

ಭಾರತವು ಭಾನುವಾರ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 38,902 ಹೊಸ ರೋಗಿಗಳು ಮತ್ತು 543 ಸಾವುಗಳು ದಾಖಲಾಗಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟು 10,77,618 ಕೋವಿಡ್-19 ಪ್ರಕರಣಗಳಲ್ಲಿ 3,73,379 ಸಕ್ರಿಯ ಪ್ರಕರಣಗಳು ಇದ್ದು, ಇವರಲ್ಲಿ 6,77,423 ಸೋಂಕಿತರು ಗುಣಮುಖರಾಗಿದ್ದು, 26,816 ಸಾವುಗಳು ದಾಖಲಾಗಿವೆ.

1,37,91,869 ಮಾದರಿಗಳನ್ನು ಜುಲೈ 18 ರವರೆಗೆ ಪರೀಕ್ಷಿಸಲಾಗಿದ್ದು, ಅದರಲ್ಲಿ 3,58,127 ಪರೀಕ್ಷೆಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights